ನವದೆಹಲಿ,ಜೂ03(Daijiworld News/AZM):ಜೆಟ್ ಏರ್ವೇಸ್ ನ 2000 ಸಿಬ್ಬಂದಿಗಳನ್ನು ನೇಮಕ ಮಾಡಲು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮುಂದಾಗಿದ್ದು, ಇದು ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿಗಳನ್ನು ಒಳಗೊಂಡಿದೆ.
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿರುವ ಜೆಟ್ ಏರ್ವೇಸ್ ನ 22 ವಿಮಾನಗಳನ್ನು ಸ್ಪೈಸ್ ಜೆಟ್ ಖರೀದಿಸಿದೆ.
ಜೆಟ್ ಏರ್ವೇಸ್ ನ ಸುಮಾರು 2 ಸಾವಿರ ಉದ್ಯೋಗಿಗಳನ್ನು ಸ್ಪೈಸ್ ಜೆಟ್ ನೌಕರಿ ನೀಡುತ್ತಿದೆ.ಜೆಟ್ ಏರ್ವೇಸ್ ಉದ್ಯೋಗಿಗಳು ಉತ್ತಮ ಅರ್ಹತೆ ಹೊಂದಿರುವ ವೃತ್ತಿಪರ ನೌಕರರಾಗಿದ್ದು, ಬರಲಿರುವ ಸಮಯಗಳಲ್ಲಿ ಹೆಚ್ಚು ಜೆಟ್ ಸಿಬ್ಬಂದಿಗಳನ್ನು ಮುಂದುವರಿಸುತ್ತೇವೆ ಎಂದು ಸ್ಪೈಸ್ ಜೆಟ್ ಹೇಳಿದೆ.
ನಾವು ಸುಮಾರು 1,100 ಜನರನ್ನು ನೇಮಕ ಮಾಡಿದ್ದೇವೆ, ಇದು 2,000 ನೌಕರರವರೆಗೆ ಮುಟ್ಟಲಿದೆ. ಇವರಲ್ಲಿ ಪೈಲಟ್ ಗಳು, ಕ್ಯಾಬಿನ್ ಸಿಬ್ಬಂದಿ, ವಿಮಾನ ನಿಲ್ದಾಣ ಸೇವೆ, ಸೆಕ್ಯೂರಿಟಿ ಸಿಬ್ಬಂದಿಗಳು ಇರಲಿದ್ದಾರೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ, ಸ್ಪೈಸ್ ಜೆಟ್ ಸುಮಾರು 14,000 ಸಿಬ್ಬಂದಿ ಮತ್ತು 100 ವಿಮಾನ ಹಾರಾಟವನ್ನು ಹೊಂದಿದೆ. ಏರ್ ಇಂಡಿಯಾ, ಜೆಟ್ ಏರ್ವೇಸ್ ಮತ್ತು ಇಂಡಿಗೊಗಳ ನಂತರ 100 ವಿಮಾನಗಳನ್ನು ಹೊಂದಿರುವ ನಾಲ್ಕನೆಯ ವಿಮಾನಯಾನ ಸಂಸ್ಥೆ ಇದಾಗಿದೆ.