ಅಸ್ಸಾಂ, ಜೂ 03 (Daijiworld News/MSP): ಭಾರತೀಯ ವಾಯು ಪಡೆಯ ಸರಕು ಸಾಗಣೆಯ ಎಎನ್-32 ವಿಮಾನ ಸೋಮವಾರ ಬೆಳಗ್ಗೆ ನಾಪತ್ತೆಯಾಗಿದೆ. ವಿಮಾನದಲ್ಲಿ 8 ಪ್ರಯಾಣಿಕರು ಮತ್ತು 5 ಸಿಬ್ಬಂದಿ ಸಹಿತ ಒಟ್ಟು 13 ಮಂದಿ ಪ್ರಯಾಣಿಕರಿದ್ದರು.
ಎಎನ್-32 ವಿಮಾನ ಅಸ್ಸಾಮಿನ ಜೋರ್ಹಾಟ್ ವಾಯುನೆಲೆಯಿಂದ ಸೋಮವಾರ ಮಧ್ಯಾಹ್ನ 12.25ರ ಸುಮಾರಿಗೆ ಟೇಕಾಫ್ ಆಗಿದ್ದು ಆ ನಂತರ 35 ನಿಮಿಷಗಳ ಒಳಗೆ ಸಂಪರ್ಕ ಕಡಿದುಕೊಂಡಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎನ್-32 ವಿಮಾನ ಸಂಪರ್ಕ ಕಳೆದುಕೊಂಡ ತಕ್ಷಣ ವಾಯುಪಡೆ ಸುಖೋಯ್-30 ಯುದ್ಧ ವಿಮಾನ ಮತ್ತು ಸಿ-130 ವಿಶೇಷ ಕಾರ್ಯಾಚರಣೆ ವಿಮಾನಗಳ ಮೂಲಕ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ.
ನಾಪತ್ತೆಯಾದ ವಿಮಾನ ಅರುಣಾಚಲ ಪ್ರದೇಶದ ಮೆಂಚುಕಾ ವಾಯು ಪಟ್ಟಿಯಲ್ಲಿ ಇಳಿಯಬೇಕಿತ್ತು. ರಷ್ಯಾ ಮೂಲದ ಅವಳಿ ಎಂಜಿನ್ನ ಮಧ್ಯಮ ಶ್ರೇಣಿಯ ಯುದ್ಧತಂತ್ರದ ಸಾರಿಗೆ ವಿಮಾನ ಗರಿಷ್ಠ 530 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದ್ದು, 39 ಪ್ಯಾರಾಟ್ರೂಪ್ಗಳು ಮತ್ತು ಐವರು ಸಿಬ್ಬಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.