ಬೆಂಗಳೂರು,ಅ.27(DaijiworldNews/TA):ಬೆಂಗಳೂರು ಮತ್ತು ಅಯೋಧ್ಯೆ ನಡುವೆ ಸಂಚರಿಸುವ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಅಯೋಧ್ಯೆ ವಾಲ್ಮೀಕಿ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಪರಿಶೀಲನೆ ಬಳಿಕ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆ ಹುಸಿಬಾಂಬ್ ಎಂದು ಅಯೋಧ್ಯೆ ಏರ್ಪೋರ್ಟ್ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇಂದು ಲಕ್ನೋದ10 ಹೋಟೆಲ್ಗಳಿಗೆ ಕೂಡ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು 45 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಮ್ಯಾರಿಯಟ್, ಫಾರ್ಚೂನ್ ಪಾರ್ಕ್ ಬಿಬಿಡಿ, ಸರಕಾ ಹೋಟೆಲ್, ದಿ ಪಿಕ್ಯಾಡಿಲಿ, ಕಂಫರ್ಟ್ ಹೋಟೆಲ್ ವಿಸ್ಟಾ, ಕ್ಲರ್ಕ್ ಅವಧ್, ದಯಾಳ್ ಗೇಟ್ವೇ, ಹೋಟೆಲ್ ಸಿಲ್ವೆಟ್ ಸೇರಿದಂತೆ ಇನ್ನಿತರ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ತಿರುಪತಿಯಲ್ಲಿನ ಅನೇಕ ಹೋಟೆಲ್ಗಳಿಗೂ ಬಾಂಬ್ ಬೆದರಿಕೆ ಬಂದಿತ್ತು. ಅನೇಕ ದಿನಗಳಿಂದ ಹುಸಿ ಬಾಂಬ್ ಬೆದರಿಕೆ ಕರೆಗಳು, ಇಮೇಲ್ಗಳು ಕೂಡ ಬರುತ್ತಿದ್ದು ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅಪರಾಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬುವುದಾಗಿ ತಿಳಿಸಿದ್ದಾರೆ.