ವಾರಣಾಸಿ, ಅ.28(DaijiworldNews/TA): ಅನೇಕ ಅಭ್ಯರ್ಥಿಗಳಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬ ಮಹತ್ವಾಕಾಂಕ್ಷೆ ಇರುತ್ತದೆ. ಆದರೆ ಅದಕ್ಕಾಗಿ ಅವರು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. 2014 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ IAS ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಅಸಾಧಾರಣ ಸಾಧನೆಯನ್ನು ಸಾಧಿಸಿದ IAS ಸ್ವಧಾ ದೇವ್ ಸಿಂಗ್ ಅವರ ಸ್ಪೂರ್ತಿದಾಯಕ ಕಥೆ ಇದು.
ಸ್ವಧಾ ಅವರ ಊರು ವಾರಣಾಸಿ, ಅಲ್ಲಿ ಅವರು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸ್ವಧಾ ಅವರು ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಸ್ವಾಧಾ ಅವರು ಶೈಕ್ಷಣಿಕವಾಗಿ ಪ್ರತಿಭಾನ್ವಿತರಾಗಿದ್ದರು. ಮತ್ತು UPSC ಪರೀಕ್ಷೆಯಲ್ಲಿ 66ನೇ ಅಖಿಲ ಭಾರತ ರ್ಯಾಂಕ್ ಕೂಡ ಪಡೆದರು.
ಸದ್ಯ, ಸ್ವಧಾ ಅವರು ರಾಯಗಢ ಜಿಲ್ಲೆಯಲ್ಲಿ ಬಿಲಾಸ್ಪುರ ಕಂದಾಯ ವಿಭಾಗದಲ್ಲಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ಛತ್ತೀಸ್ಗಢದ ಪೂರ್ವ ಭಾಗದಲ್ಲಿದೆ. ಅವರ ಪತಿ ಸಮರ್ಥ್ ವರ್ಮಾ, ಅವರು ಐಎಎಸ್ ಅಧಿಕಾರಿಯಾಗಿದ್ದಾರೆ ಮತ್ತು ಒಡಿಶಾದ ಪುರಿಯಲ್ಲಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.