ಕಾಶ್ಮೀರ, ಜೂ03(Daijiworld News/SS): ಇಲ್ಲಿನ ದಕ್ಷಿಣ ಕಾಶ್ಮೀರದ ಶೋಪಿಯಾನ್ನಲ್ಲಿ ರಾಷ್ಟ್ರೀಯ ರೈಫಲ್ಸ್ನ ಕ್ಷಿಪ್ರ ಕಾರ್ಯಾಚರಣಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹಾಗೂ ಮತ್ತೋರ್ವ ತಳಮಟ್ಟದ ಕಾರ್ಯಕರ್ತ(ಒಜಿಡಬ್ಲ್ಯು) ಹತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂಜಾಗೃತಾ ಕ್ರಮವಾಗಿ ವದಂತಿಗಳನ್ನು ಹರಡದಂತೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಕುಲ್ಗಾಮ್ನಲ್ಲಿ ಸ್ಥಗಿತಗೊಳಿಸಲಾಗಿದೆ.
ಉಗ್ರರು ಅಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶೋಪಿಯಾನ್ನ ಮೂಲು ಚಿತ್ರಗಮ್ ಗ್ರಾಮದಲ್ಲಿ 44 ಆರ್ ಆರ್ನ ಕ್ಯೂಆರ್ಟಿ ನಾಕಾ ತಪಾಸಣೆ ಆರಂಭಿಸಿತ್ತು. ವಾಹನವೊಂದು ಈ ರಸ್ತೆಯಲ್ಲಿ ಬಂದಾಗ ನಾಕಾ ಸಿಬ್ಬಂದಿ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ವಾಹನ ನಿಲ್ಲಿಸದೆ ಅಲ್ಲಿಂದ ತಪ್ಪಿಸಿಕೊಳ್ಳಲು ಉಗ್ರರು ಯತ್ನಿಸಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯನ್ನು ಮೃತಪಟ್ಟ ಓರ್ವನನ್ನು ಫಿರ್ದೌಸ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಈತ ಒಂದು ತಿಂಗಳ ಹಿಂದೆಯಷ್ಟೇ ಉಗ್ರ ಸಂಘಟನೆಗೆ ಸೇರಿದ್ದ ಎಂದು ತಿಳಿದುಬಂದಿದೆ. ಮತ್ತೊಬ್ಬನನ್ನು ಸಜ್ಜಾದ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಈತ ವಾಹನ ಚಾಲಕನಾಗಿದ್ದ. ಈತ ಉಗ್ರ ಸಂಘಟನೆಗೆ ತಳಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆದರೆ ವಾಹನ ಚಾಲಕ ಸಜ್ಜಾದ್ ಅಹ್ಮದ್ ಸಜ್ಜಾದ್ ಅಹ್ಮದ್ ಯಾವುದೇ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.