ಬೆಂಗಳೂರು,ಅ.28(DaijiworldNews/AK): 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್ಗೆ ನೋಟಿಫಿಕೇಶನ್ ಆಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ರೈತರ ಜಮೀನಿಗೆ ವಕ್ಫ್ ಬೋರ್ಡ್ನಿಂದ ನೊಟೀಸ್ ವಿಚಾರದ ಕುರಿತು ವಿಧಾನಸೌಧದಲ್ಲಿ ಎಂ ಬಿ ಪಾಟೀಲ್, ಕೃಷ್ಣಭೈರೇಗೌಡ, ಜಮೀರ್ ಅಹಮದ್ರಿಂದ ಸುದ್ದಿಗೋಷ್ಠಿ ನಡೆಯಿತು.ಈ ವೇಳೆ ಕೃಷ್ಣಭೈರೇಗೌಡ ಮಾತನಾಡಿ, ಡಿಸಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಆಗಿದೆ. ದಾಖಲಾತಿ ಇರುವ ರೈತರು ತಂದು ಡಿಸಿಗೆ ಕೊಡಬಹುದು. ದಾಖಲಾತಿ ಇದ್ದರೆ ಅವರಿಗೆ ಜಮೀನು ಸಿಕ್ಕೇ ಸಿಗುತ್ತದೆ. ಮಂಜೂರು ಆಗಿರೋ ಜಮೀನು ಯಾರಿಂದಲೂ ವಾಪಸ್ ಪಡೆಯುವುದಿಲ್ಲ. 1,319 ಎಕರೆ ಮುಸ್ಲಿಂ ಸಮುದಾಯ ಸಂಘಟನೆಗಳ ಹೆಸರಲ್ಲಿದೆ ಎಂದರು.
ವಿಜಯಪುರದಲ್ಲಿ ವಕ್ಫ್ ಸಂಸ್ಥೆಗೆ ಸೇರಿದ ಜಮೀನು ಮತ್ತೊಂದು ಕಡೆ ರೈತರ ಜಮೀನು ಇದರ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇವೆ. ವ್ಯವಸ್ಥಿತವಾಗಿ ವಿವಾದ ಮಾಡೋ ಕೆಲಸ ಆಗುತ್ತಿದೆ. 1973-74ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ ಆಗಿದೆ.14,201 ಎಕರೆ ನೋಟಿಫಿಕೇಶನ್ ಆಗಿದೆ. ಇದರಲ್ಲಿ 773 ಎಕರೆ ಮಾತ್ರ ವಕ್ಫ್ಗೆ ನೋಟಿಫಿಕೇಶನ್ ಆಗಿದೆ. ಕೆಲವು ದರ್ಗಾ, ಮಸೀದಿ ಸೇರಿದ ಜಾಗ ಇದೆ. 1,319 ಎಕರೆ ವೈಯಕ್ತಿಕ ಅನುಭೋಗದಲ್ಲಿ ಇಲ್ಲ. ಯಾರಿಗೂ ಮಂಜೂರು ಆಗಿಲ್ಲ. ಅವು ಮುಸ್ಲಿಂ ಸಮುದಾಯದ ಸಂಘಟನೆಗಳ ಹೆಸರಿನಲ್ಲಿ ಇವೆ. 11,835 ಎಕರೆ ರೈತರಿಗೆ ಉಳುವವನೇ ಭೂಮಿಯ ಒಡೆಯ ಅಡಿ ಮಂಜೂರು ಆಗಿದೆ ಎಂದು ತಿಳಿಸಿದರು.