ಕೋಲ್ಕತ್ತಾ, ಜೂ03(Daijiworld News/SM): ಸಿಎಂ ಮಮತಾ ಬ್ಯಾನರ್ಜಿ ಸ್ವತಃ ಬಿಜೆಪಿ ಕಚೇರಿಯ ಬಾಗಿಲು ಮುರಿದು ಅಲ್ಲಿ ಟಿಎಂಸಿ ಚಿಹ್ನೆ ಬಿಡಿಸಿ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಕಚೇರಿ ವಶಪಡಿಸಿಕೊಂಡಿರುವ ಆರೋಪ ಪ್ರತ್ಯಾರೋಪ ಕೇಳಿಬಂದಿದೆ. ಕಚೇರಿಯ ಕೇಸರಿ ಬಣ್ಣದ ಗೋಡೆಯ ಮೇಲೆ ತೃಣಮೂಲ ಕಾಂಗ್ರೆಸ್'ನ ಚಿಹ್ನೆಯನ್ನು ಮಮತಾ ಬ್ಯಾನರ್ಜಿ ಬರೆದಿದ್ದಾರೆ,
ಈ ಘಟನೆಗೂ ಮುನ್ನ ತೃಣ ಮೂಲ ಕಾಂಗ್ರೆಸ್'ನ ಕಾರ್ಯಕರ್ತರು ತಮ್ಮ ಕಚೇರಿಯನ್ನು ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಆಯ್ಕೆಗೊಂಡ ಸಂಸದ ಅರ್ಜುನ್ ಸಿಂಗ್ ಅವರ ಬೆಂಬಲಿಗರು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಈ ಘಟನೆ ನಡೆದಿದ್ದು, ಮಮತಾ ಬ್ಯಾನರ್ಜಿ ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಕಚೇರಿಗೆ ತೆರಳಿ, ಬಿಜೆಪಿ ಚಿಹ್ನೆಯನ್ನು ತೆಗೆದು ಟಿಎಂಸಿ ಚಿಹ್ನೆಯನ್ನು ಬರೆದಿದ್ದಾರೆ ಎಂದು ವರದಿ ಪ್ರಕಟವಾಗಿದೆ.