ಕೋಲ್ಕತ್ತಾ, ಜೂ03(Daijiworld News/SS): ಪುಟ್ಟ ಬಾಲಕಿಯ ಜೀವ ಉಳಿಸುವುದಕ್ಕಾಗಿ ರಂಜಾನ್ ಉಪವಾಸವನ್ನು ತ್ಯಜಿಸಿ ಯುವನೋರ್ವ ರಕ್ತದಾನ ಮಾಡಿ ಮಾದರಿಯಾಗಿದ್ದಾನೆ.
ಥಲಸ್ಸೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ 7 ವರ್ಷದ ಬಾಲಕಿಗೆ ಎ - ಪೊಸಿಟಿವ್ ರಕ್ತದ ಅಗತ್ಯವಿತ್ತು. ಈ ಬಾಲಕಿ ಮತ್ತವರ ಕುಟುಂಬ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ವಾಸಿಸುತ್ತಿದ್ದರು. ಬಾಲಕಿಗೆ ರಕ್ತದ ತುರ್ತು ಅವಶ್ಯಕತೆ ಇದೆ ಎಂದು ತಿಳಿದ ಬೆನ್ನಲ್ಲೇ ಒಸ್ಮಾನ್ ಗನಿ ಶೇಖ್ ಎಂಬ ಮುಸ್ಲಿಂ ಯುವಕ ಹಿಂದೆ ಮುಂದೆ ನೋಡದೇ ರಕ್ತದಾನ ಮಾಡಲು ರಂಜಾನ್ ಉಪವಾಸವನ್ನು ತ್ಯಜಿಸಿದ್ದಾನೆ.
ಮೀನು ಮಾರಾಟಗಾರ ಗೌತಮ್ ದಾಸ್'ನ ಮಗಳು ರಾಖಿಗೆ ಕಳೆದ 3 ವರ್ಷಗಳಿಂದ ಥಲಸ್ಸೆಮಿಯಾ ಸಮಸ್ಯೆ ಇದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ರಕ್ತ ಕೊಡಿಸುವ ತುರ್ತು ಅಗತ್ಯವಿದೆ ಎಂದು ಹೇಳಿದ್ದರು.
ಒಸ್ಮಾನ್ ಗನಿ ಶೇಖ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಬ್ಲಡ್ ಡೋನರ್ ಎಂದು ಗುರುತಿಸಿಕೊಂಡಿದ್ದ. ಇದನ್ನು ನೋಡಿದ ಬಾಲಕಿಯ ತಂದೆ ಗನಿಗೆ ಕರೆ ಮಾಡಿದ್ದಾರೆ. ಕರೆ ಬಂದ ತಕ್ಷಣವೇ ಗನಿ ಉಪವಾಸ ಅಂತ್ಯಗೊಳಿಸಿ ಬಾಲಕಿಗೆ ರಕ್ತ ನೀಡಲು ನಿರ್ಧರಿಸಿದ್ದಾರೆ.