ಬೆಂಗಳೂರು,ನ.01(DaijiworldNews/TA):ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸೋಕೆ ಹೋದರೆ ಕರ್ನಾಟಕದಲ್ಲಿ ಕ್ರಾಂತಿ ಆಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕರ್ನಾಟಕ ರಾಜ್ಯೋತ್ಸವ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ಇದು ಸಿದ್ದರಾಮಯ್ಯ ಅಂತಾ ಪ್ರಶ್ನೆ ಅಲ್ಲ, ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದಂತೆ. ಈ ಬಗ್ಗೆ ಎಲ್ಲಾ ಪಕ್ಷದವರು ಚಿಂತನೆ ಮಾಡಬೇಕು, 40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯಗೆ ಏನೂ ಸಿಕ್ಕಿಲ್ಲ. ಯಾರೋ ಬೀದಿಯಲ್ಲಿ ಹೋಗುವವರಿಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ ಇದರಿಂದ ಹೀಗೆ ಆಗುತ್ತಿದೆ ಅಷ್ಟೆ. ಸಿಎಂಗೆ ನೋಟಿಸ್ ಕೊಟ್ಟ ದಿನವೇ ರಾಜ್ಯಪಾಲರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ್ದೇ ನಾನು ಎಂಬುವುದಾಗಿ ಹೇಳಿದ್ದಾರೆ.
ಸಂವಿಧಾನ ಬದ್ಧವಾಗಿ ಯಾರೂ ಬೇಕಾದರೂ ಸಿಎಂ ಆಗಬಹುದು. ಆದರೆ ಸಿದ್ದರಾಮಯ್ಯ ಇತಿಹಾಸವೇನು, ಅವರ ಮಾತೇನು, ಅವರ ವಯಸ್ಸೇನು. ಜೆಡಿಎಸ್ನಿಂದ ಸಿದ್ದರಾಮಯ್ಯರನ್ನು ತೆಗೆದಾಗ ನಾನೇ ಪ್ರತಿಭಟನೆ ಮಾಡಿದ್ದು, ಅಂದು ಜೆಡಿಎಸ್ನವರನ್ನು ಪ್ರಶ್ನೆ ಮಾಡಿದ್ದೂ ನಾನೇ ಎಂಬುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಎಂಪರ ನಡೆಸಿದರು.