ಹುಬ್ಬಳ್ಳಿ, ನ.01(DaijiworldNews/AK): ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ನಂತರ ಗ್ಯಾರಂಟಿಗಳನ್ನು ಬೇಕಾದರೆ ರದ್ದು ಮಾಡಿ ಎನ್ನುವ ಮಾನಸಿಕತೆ ತೋರುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ದೃಷ್ಟಿಯಿಂದ ಗ್ಯಾರಂಟಿ ಕೊಡ್ತಾರೆ ಅನ್ನೋ ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಂದ ಸ್ಪಷ್ಟ ಆಗುತ್ತದೆ. ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದೆ. ಅಶ್ವಾಸನೆಗಳಿಂದ ಇಡೀ ರಾಜ್ಯವನ್ನ ದಿವಾಳಿಯತ್ತ ನೂಕುವ ಪ್ರಯತ್ನ ಮಾಡಿದೆ. ಚುನಾವಣೆ ವೇಳೆ ಜನರಿಗೆ ಮಂಕು ಬೂದಿ ಎರಚಿ, ನಂತರ ರದ್ದು ಮಾಡುವ ಮೂಲಕ ಮೋ ಸ ಮಾಡುತ್ತಿದೆ ಎಂದು ವಾಗ್ದಾಳಿ ನಡಸಿದರು.
2023-24ರಲ್ಲಿ ಪದವಿ ಮುಗಿಸಿದ ಯಾವ ಯುವಕರಿಗೆ ಯುವಶಕ್ತಿ ಬಂದಿದೆ. ಗೃಹಲಕ್ಷ್ಮಿ , ಶಕ್ತಿ ಯೋಜನೆ ಅಷ್ಟೇ ಆರಂಭ ಮಾಡಿದ್ದಾರೆ ಎಂದರು. ಇನ್ನು 5 ಕೆಜಿ ಅಕ್ಕಿ ನಾವು ಕೊಡುತ್ತಿದ್ದೇವೆ. ಕಾಂಗ್ರೆಸ್ ಅನ್ನಭಾಗ್ಯ ಅಂತ ಇವರು ಬರೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಂತಹ ಕಳ್ಳರು ಜಗತ್ತಿನಲ್ಲಿ ಬುತ್ತಿ ಕಟ್ಟಿಕೊಂಡು ಹುಡುಕಾಡಿದರೂ ಸಿಗುವುದಿಲ್ಲ ಎಂದು ಕಿಡಿಕಾರಿದರು.