ಬೆಂಗಳೂರು,ನ.02(DaijiworldNews/TA): ಬುದ್ಧಿ ಹೇಳಿಸಿಕೊಳ್ಳುವ ಹಂತಕ್ಕೆ ಮೋದಿ ಬಂದಿದ್ದಾರೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ಈಗ ಜನರಿಂದ ಬುದ್ಧಿ ಹೇಳಿಸಿಕೊಳ್ಳಬೇಕಾದ ಸ್ಥಿತಿಗೆ ಮೋದಿಯವರು ಬಂದಿದ್ದಾರೆ. ತಪ್ಪು ಮಾಡಿದರೆ ಮೋದಿಯವರಿಗೂ ಬುದ್ಧಿ ಹೇಳಬೇಕಾಗುತ್ತದೆ. ಮೋದಿ ವಿರುದ್ಧ ಸಿಎಂ ಪುಢಾರಿ ಪದ ಬಳಸಿದ್ದಾರೆ ಎಂದರೆ ನಾಲಗೆ ಬಿಗಿ ಹಿಡಿದು ಮಾತನಾಡುವ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ. ಪ್ರಜಾಪ್ರಭುತ್ವ ಯಶಸ್ಸಿಗೆ ಒಕ್ಕೂಟ ವ್ಯವಸ್ಥೆ ಕಾರಣ. ಒಕ್ಕೂಟ ವ್ಯವಸ್ಥೆಯನ್ನೇ ಅಶಕ್ತಗೊಳಿಸುವ ನಿಟ್ಟಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ ಪ್ರಧಾನಿ ಎಂದು ಗರಂ ಆದರು.
ಟ್ವೀಟ್ ಮೂಲಕ ಕರ್ನಾಟಕದ ಬಗ್ಗೆ ಹೇಳಿಕೆ ಕೊಡೋದು ಸರಿನಾ? ನ್ಯಾಯಬದ್ಧವಾಗಿ ಬರಬೇಕಾದ ಬರ ಪರಿಹಾರ ಕೊಡಲಿಲ್ಲ. ಸುಪ್ರೀಂ ಕೋರ್ಟ್ಗೆ ಹೋಗಿ ನಮ್ಮ ಪಾಲು ಪಡೆಯಬೇಕಾಯಿತು. ಇದು ನಿಮ್ಮ ರೀತಿ ನೀತಿ, ಗ್ಯಾರಂಟಿಗಳನ್ನ ಸಹಿಸದೆ ಸಂಕಟ ಬಿದ್ದು ಮಾತನಾಡಿದರೆ ಹೇಗೆ? ಎಂದು ಕಿಡಿಕಾರಿದ್ದಾರೆ.