ಆಂಧ್ರಪ್ರದೇಶ,ನ.03(DaijiworldNews/TA):ಮುಖ್ಯಮಂತ್ರಿ ಚಂದ್ರಬಾಬುಗೆ ಮಹಿಳಾ ಅಭಿಮಾನಿಯೊಬ್ಬರು ಮುತ್ತಿಡಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ಮಹಿಳಾ ಅಭಿಮಾನಿಯೊಬ್ಬರು ಚಂದ್ರಬಾಬು ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದರು. ಆಕೆಯ ಭುಜದ ಮೇಲೆ ಪ್ರೀತಿಯಿಂದ ಕೈಯಿಟ್ಟು ಚಿತ್ರ ತೆಗೆಯಲು ಸಿಎಂ ಚಂದ್ರಬಾಬು ಕ್ಯಾಮೆರಾ ನೋಡುತ್ತಿದ್ದ ವೇಳೆ ಮಹಿಳೆ ಏಕಾಏಕಿ ಚಂದ್ರಬಾಬುಗೆ ಮುತ್ತು ಕೊಡಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಪಕ್ಕಕ್ಕೆ ಎಳೆಯಲು ಯತ್ನಿಸಿದ್ದಾರೆ.
ಆದರೆ, ಚಂದ್ರಬಾಬು ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಮಹಿಳೆಯಿಂದ ದೂರ ಸರಿದು ಫೋಟೋ ತೆಗೆಸಿಕೊಂಡಿದ್ದಾರೆ. ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಮಹಿಳೆ ಚಂದ್ರಬಾಬುಗೆ ಮುತ್ತಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಕೆಗೆ ಮುತ್ತು ಕೊಡುವ ಯತ್ನಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ, ತನ್ನ ನೆಚ್ಚಿನ ನಾಯಕನ ಮೇಲಿನ ಪ್ರೀತಿ ಅಭಿಮಾನ ತೋರುವ ಪ್ರಯತ್ನ ಇದಾಗಿದೆ ಎಂದು ನೆಟ್ಟಿಗರು ಕಮೆಂಟ್ ಕೂಡಾ ಮಾಡಿದ್ದಾರೆ.