ಕೇರಳ, ನ.03(DaijiworldNews/AK): ಕಳೆದ ಏಪ್ರಿಲ್ನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವ ನಡೆಯುವ ಸ್ಥಳಕ್ಕೆ ತೆರಳಲು ಆ್ಯಂಬುಲೆನ್ಸ್ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಂಬಂಧಪಟ್ಟಂತೆ ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಮತ್ತು ಇನ್ನಿಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ಸುರೇಶ್ ಗೋಪಿ, ಅಭಿಜಿತ್ ನಾಯರ್ ಮತ್ತು ಆ್ಯಂ ಬುಲೆನ್ಸ್ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279, 34 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 179, 184, 188 ಮತ್ತು 192ರಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತ್ರಿಶೂರ್ ಪೂರ್ವ ಪೊಲೀಸರು ತಿಳಿಸಿದ್ದಾರೆ.
‘ಪೂರಂ ಉತ್ಸವಕ್ಕೆ ತೆರಳಲು ಸುರೇ ಶ್ ಗೋಪಿ ಅವರು ಆಂಬ್ಯುಲೆನ್ಸ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಿಪಿಐ ಸ್ಥಳೀಯ ನಾಯಕ ಕೆ.ಪಿ. ಸುಮೇ ಶ್ ಅವರು ದೂರು ದಾಖಲಿಸಿದ್ದರು. ಗೋಪಿ ಅವರು ಸೇ ವಾ ಭಾರತಿ ಆಂಬುಲೆನ್ಸ್ ಮೂಲಕ ಪೂರಂ ಮೈದಾನಕ್ಕೆ ಬಂದಿದ್ದರು. ಈ ಮೂಲಕ ಅವರು ವೈ ದ್ಯಕೀ ಯ ತುರ್ತು ಪರಿಸ್ಥಿತಿಗಳಿಗೆ ಮೀ ಸಲಿರುವ ವಾಹನವನ್ನು ವೈ ದ್ಯಕೀ ಯೇ ತರ ಉದ್ದೇ ಶಗಳಿಗೆ ಬಳಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.