ಹುಬ್ಬಳ್ಳಿ, ನ.03(DaijiworldNews/AK):ವಕ್ಫ್ ಗೆಜೆಟ್ ನೋಟಿಫಿಕೇಶನ್ ಮಾಡಿರುವುದರಲ್ಲಿ ಬಿಜೆಪಿ ಪಾಲಿದೆ. ಅವರೇ ನೋಟಿಸ್ ಕೊಟ್ಟು ನಾಟಕ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರವಾಗಿ ಮೊದಲು ಪತ್ರ ಬರೆದಿದ್ದು ಬಿಜೆಪಿಯವರು. ಇದೀಗ ಚುನಾವಣೆ ಇದೆ ಎಂದು ನಾಟಕ ಮಾಡುತ್ತಿದ್ದಾರೆ. ಇದು ಕಪಟ ರಾಜಕೀಯ ನಾಟಕ. ಈ ವಿಚಾರವಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ.ಕೇವಲ ಹಿಂದೂ ರೈತರು ಅಲ್ಲ, ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ ಎಂದರು.
ನೋಟಿಫಿಕೇಶನ್ ಮಾಡಿರುವುದರಲ್ಲಿ ಬಿಜೆಪಿ ಪಾಲಿದೆ. ಅವರೇ ನೋಟಿಸ್ ಕೊಟ್ಟು ನಾಟಕ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಕಿಡಿಕಾರಿದ್ದಾರೆ.ವಕ್ಫ್ ಹಾಗೂ ಮಠ ರಾಷ್ಟ್ರೀಕರಣ ಮಾಡಿ ಅನ್ನುವುದು ಅಪಾಯಕಾರಿ. ನಾವು ಮಾತನಾಡುವುದಕ್ಕೆ ಹೋದರೆ ಇವರ ಏನೇನೋ ಮಾತಾಡುತ್ತಾರೆ. ನಾವು ಎಲ್ಲಾ ಮಾತನಾಡಬೇಕಾಗುತ್ತದೆ ಎಂದರು.