ಮಹಾರಾಷ್ಟ, ನ.05(DaijiworldNews/AK): ಒಬ್ಬ ಇಂಜಿನಿಯರ್ ತನ್ನ ಸ್ವಯಂ ಅಧ್ಯಯನ ವಿಧಾನದಿಂದಲೇ ಮೊದಲ ಪ್ರಯತ್ನದಲ್ಲೇ 22ನೇ ರ್ಯಾಂಕ್ ನಲ್ಲಿ ಯುಪಿಎಸ್ಸಿಯಲ್ಲಿ ಗೆದ್ದವರ ಕಥೆ ಇಲ್ಲಿದೆ.
ಮಹಾರಾಷ್ಟ್ರ ಮೂಲದ ಮಂದರ್ ಪತ್ಕಿ 2020ನೇ ಬ್ಯಾಚ್ನಲ್ಲಿ ಮಹಾರಾಷ್ಟ್ರ ಕೇಡರ್ನ ಐಎಎಸ್ ಅಧಿಕಾರಿಯಾದವರು. ಪ್ರಸ್ತುತ ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್ಮೆಂಟ್ ಸಚಿವಾಲಯದಲ್ಲಿ ಮಂದರ್ ಅಸಿಸ್ಟಂಟ್ ಕಲೆಕ್ಟರ್ ಮತ್ತು ಪ್ರಾಜೆಕ್ಟ್ ಆಫೀಸರ್ ಆಗಿ ನಿಯೋಜನೆಗೊಂಡಿದ್ದಾರೆ.
2022ರ ಜುಲೈ ನಿಂದ ನವೆಂಬರ್ ವರೆಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ಅಸಿಸ್ಟಂಟ್ ಸೆಕ್ರೇಟರಿ ಆಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ಅಮರಾವತಿ'ಯಲ್ಲಿ ತರಬೇತುದಾರ ಅಸಿಸ್ಟಂಟ್ ಕಲೆಕ್ಟರ್ ಆಗಿ ಕರ್ತವ್ಯ ಸಲ್ಲಿಸಿದ್ದರು.
ಮಂದರ್ ಪತ್ಕಿ ಯುಪಿಎಸ್ಸಿ ಸಿವಿಲ್ ಸರ್ವೀಸೆಸ್ ಪರೀಕ್ಷೆಗಳನ್ನು 22ನೇ ರ್ಯಾಂಕ್ ನೊಂದಿಗೆ 2019 ರಲ್ಲಿ ಯಶ್ಸಸ್ಸು ಪಡೆದರು.ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಯಾವುದೇ ಕೋಚಿಂಗ್ ಇಲ್ಲದೆ ಸ್ವಯಂ ಅಧ್ಯಯನದಿಂದ ತಮ್ಮ ಮೊದಲ ಪ್ರಯತ್ನದಲ್ಲೇ ನಾಗರೀಕ ಸೇವೆಗಳ ಪರೀಕ್ಷೆಯನ್ನು ಪಾಸ್ ಮಾಡಿದರು.ಮಂದರ್ ಪತ್ಕಿ ರವರು ಯುಪಿಎಸ್ಸಿ ಸಿಎಸ್ಇ ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯವಾಗಿ ಆಂಥ್ರಪಾಲಜಿ ಆಯ್ಕೆ ಮಾಡಿಕೊಂಡಿದ್ದರು.
ಪುಣೆಯ ವಿಶ್ವಕರ್ಮ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಅದಕ್ಕೂ ಮೊದಲು ಪುಣೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮ ಅಧ್ಯಯನ ಮಾಡಿದ್ದರು. ತಮ್ಮ ಇಂಜಿನಿಯರಿಂಗ್ ಪದವಿ ನಂತರವೇ ಇವರು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದು. ಯುಪಿಎಸ್ಸಿ ಪಾಸ್ ಮಾಡಲು ಸೆಲ್ಫ್ ಸ್ಟಡಿ ಜತೆಗೆ ತಮ್ಮ ಕಠಿಣ ಪರಿಶ್ರಮದಿಂದ ಕೇವಲ ಒಂದು ವರ್ಷದಲ್ಲೇ ಓದಿ 22ನೇ ರ್ಯಾಂಕ್ ನಲ್ಲಿ ಸಾಧನೆ ಮಾಡಿದರು.