ಬೆಂಗಳೂರ, ನ.04(DaijiworldNews/AK): ವಿಶೇಷ ತನಿಖಾ ತಂಡದಲ್ಲಿರುವ ಎಡಿಜಿಪಿ ಚಂದ್ರಶೇಖರ್ಗೆ ಬೆದರಿಕೆ ಆರೋಪದ ಹಿನ್ನೆಲೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆದರಿಕೆ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡಿರುವ ಹಿನ್ನೆಲೆ, ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅವರ ಅಪ್ತ ಸುರೇಶ್ ಬಾಬು ಮೇಲೆ ದೂರು ದಾಖಲಾಗಿತ್ತು.
ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡಿರುವುದಾಗಿ ದೂರು ನೀಡಲಾಗಿತ್ತು. ಎಸ್ಐಟಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹೆಚ್ಚಿನ ಸಾಕ್ಷ್ಯಾಧಾರ ಕಲೆ ಹಾಕಲಾಗುತ್ತಿದೆ. ಸಾಕ್ಷ್ಯಾಧಾರ ಇರುವ ಹಿನ್ನೆಲೆ ರಾಜ್ಯಾಪಾಲರ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು.ಇದೇ ವಿಚಾರವಾಗಿ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿತ್ತು.