ರಾಮನಗರ,ನ.04(DaijiworldNews/AK): ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕೋಸ್ಕರ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು.
ಚನ್ನಪಟ್ಟಣದ ವೀರೂಪಾಕ್ಷಿಪುರದಲ್ಲಿ ನಡೆದ ಎನ್ಡಿಎ ಸಮಾವೇಶದಲ್ಲಿ ಮಾತಾಡಿದ ಅವರು, ಅಂಬ್ಯುಲೆನ್ಸ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದ ಡಿಕೆ ಸುರೇಶ್ಗೆ ತಿರುಗೇಟು ನೀಡಿದರು.ಆ ಮಾತು ಯಾರೇ ಹೇಳಿರಲಿ, ಎದೆ ಚಾಚಿ ಹೇಳುತ್ತೇನೆ, ಜನತೆಯ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನರ ಸೇವೆ ಮಾಡುತ್ತೇನೆ ಎಂದರು.
ಅನ್ನದ ಋಣವನ್ನು ತಪ್ಪಿಸಲಾಗದು, ಆ ಋಣ ಎಲ್ಲಿಗೆ ಕರೆದೊಯ್ಯುತ್ತದೆಯೋ ಹೇಳಲಾಗದು. ಮೂರು ತಿಂಗಳವರೆಗೆ ಮಾಧ್ಯಮದವರು ತನ್ನಲ್ಲಿಗೆ ಬರಲಿಲ್ಲ, ತಾನೇನು ಅಂತರಾಷ್ಟ್ರೀಯ ಖ್ಯಾತಿಯ ಅಪರಾಧಿಯಾಗಿದ್ದೆನೇ? ಆಗ ತಾನು ಅನುಭವಿಸಿದ ನೋವು ಕೇವಲ ತನಗೆ ಮಾತ್ರ ಗೊತ್ತು ಎಂದು ನುಡಿದರು.