ಬೆಂಗಳೂರು, ನ.06(DaijiworldNews/ AK): ಸಿಎಂ ಸಿದ್ದರಾಮಯ್ಯ ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ ಸಿಎಂ ಪರ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ) ವಿಚಾರಣೆಗೆ ಹಾಜರಾದ ವಿಚಾರವಾಗಿ ಮಾತನಾಡಿದ ಅವರು, ಸಿಎಂಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದರು. ಚುನಾವಣೆ ಪ್ರಚಾರ ಇದ್ದರೂ ಕೂಡ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಕಾನೂನಿಗೆ ಗೌರವ ಕೊಡಬೇಕು ಎಂದು ಪ್ರಚಾರವನ್ನು ಕೈಬಿಟ್ಟು ವಿಚಾರಣೆಗೆ ಹಾಜರಾಗಿದ್ದಾರೆ ಎಂದರು.
ಸಿಎಂ ಅವರು ಒಂದು ವಾರ ವಿನಾಯಿತಿ ಕೇಳಬಹುದಿತ್ತು. ಆದರೆ ಅಧಿಕಾರದಲ್ಲಿ ಇದ್ದುಕೊಂಡು ಅಧಿಕಾರ ದುರುಪಯೋಗ ಮಾಡಬಾರದು ಎಂದು ಹೇಳಿ ಕಾನೂನಿಗೆ ಗೌರವ ಕೊಟ್ಟು ಹೋಗಿದ್ದಾರೆ ಎಂದರು.