ಕೋಲ್ಕತಾ, ಜೂ 4 Daijiworld News/MSP): ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವಿನ ಜೈ ಶ್ರೀರಾಮ್ ಗುದ್ದಾಟ ಯಾಕೋ ಮುಗಿಯುವಂತೆ ಕಾಣುತ್ತಿಲ್ಲ. ಬಂಗಾಳದಲ್ಲಿ ಲೋಕಸಭಾ ಚುನಾವಣೆ ಸಮಯದಿಂದಲೂ ಜೈ ಶ್ರೀರಾಮ್ ಘೋಷಣೆಗೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಲೇ ಬಂದಿದೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ್ದವರ ವಿರುದ್ಧ ಸಿಡಿಮಿಡಿಗೊಂಡಿದ್ದ ಮಮತಾ ಅವರನ್ನು ಅರೆಸ್ಟ್ ಮಾಡಿಸಿದ್ದರು.
ಕೆಲ ದಿನಗಳ ಹಿಂದೆ ತಾವು ಸಾಗುವ ಮಾರ್ಗದಲ್ಲಿ ಘೋಷಣೆ ಕೂಗುತ್ತಿದ್ದ ವ್ಯಕ್ತಿ ವಿರುದ್ಧ ಸಿಟ್ಟಾಗಿದ್ದರು. ಮಮತಾ ಅವರ ಈ ವರ್ತನೆಗೆ ಪ್ರತ್ಯುತ್ತರವಾಗಿ 'ಜೈ ಶ್ರೀರಾಮ್' ಎಂಬ ಕೈ ಬರಹದ ಒಕ್ಕಣೆಯುಳ್ಳ ಹತ್ತು ಲಕ್ಷ ಅಂಚೆ ಕಾರ್ಡ್ಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಲು ಪಶ್ಚಿಮ ಬಂಗಾಳ ಬಿಜೆಪಿ ನಿರ್ಧರಿಸಿತ್ತು. ಇದಕ್ಕೆ ತಿರುಗೇಟು ನೀಡಿದ ಎಂ ಮಮತಾ ಜೈ ಶ್ರೀರಾಮ್ ಘೋಷಕ್ಕೆ ಟಾಂಗ್ ನೀಡಲು ತಮ್ಮ ಸಾಮಾಜಿಕ ಜಾಲತಾಣದ ಡಿಪಿಯನ್ನು ಜೈ ಹಿಂದ್, ಜೈ ಬಾಂಗ್ಲಾ ಎಂದು ಬದಲಾಯಿಸಿದ್ದರು.
ಈ ಘರ್ಷಣೆಯ ಮುಂದುವರಿದ ಭಾಗವಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್ ವರ್ಗೀಯ ಅವರು ಮಮತಾಗೆ ಜೈ ಶ್ರೀರಾಮ್ ಎನ್ನುವ ಘೋಷಣೆ ಕೇಳಿಸಿಕೊಳ್ಳಲು ಆಗುದಿಲ್ಲ ಎಂದರೆ ಯಾರಾದ್ರೂ ಆಕೆಯ ಕಿವಿಯಲ್ಲಿ ಬಿಸಿ ಎಣ್ಣೆ ಸುರಿಯಬೇಕು ಎಂದಿದ್ದಾರೆ. ಬಿಜೆಪಿ ವಿಜಯದಿಂದ ಮಮತಾ ಹತಾಶರಾಗಿದ್ದು, ಇದೇ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು. ಈಗ ಜೈ ಶ್ರೀರಾಮ್ ಎಂದರೆ ಮಮತಾ ಸಿಡಿಮಿಡಿಗೊಳ್ಳುತ್ತಾರೆ. ಘೋಷ ಮಂತ್ರವನ್ನು ಆಕೆ ತನ್ನ ನಿಂದನೆ ಎಂದುಕೊಳ್ಳುತ್ತಾರೆ. ಹೀಗಾಗಿ ಯಾರಾದರೂ ಅವರ ಕಿವಿಗೆ ಬಿಸಿ ಬಿಸಿ ಎಣ್ಣೆ ಸುರಿಯಬೇಕು ಎಂದಿದ್ದಾರೆ.