ಶ್ರೀನಗರ, ಜೂ 4 Daijiworld News/MSP): ಕಾಶ್ಮೀರ ಕಣಿವೆಯಲ್ಲಿನ ಟಾಪ್ 10 ಉಗ್ರರ ಪಟ್ಟಿ ಜಮ್ಮು-ಕಾಶ್ಮೀರ ಭದ್ರತಾ ಪಡೆ ಮಂಗಳವಾರ ಬಿಡುಗಡೆ ಮಾಡಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಉಗ್ರರನ್ನು ಮಟ್ಟಹಾಕಲು ತಯಾರಿ ಮಾಡಿಕೊಂಡಿರುವ ಭದ್ರತಾ ಪಡೆ, ಇದಕ್ಕಾಗಿಯೇ ಟಾಪ್ 10 ಉಗ್ರರ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪೈಕಿ 2010ರಿಂದ ಭಯೋತ್ಪಾದನಾ ಸಂಘಟನೆ ಜೊತೆ ಶಾಮೀಲಾಗಿರುವ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ರಿಯಾಝ್ ಅಹ್ಮದ್ ಟಾಪ್ 10 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಶ್ರೀನಗರದ ಮೊಹಮ್ಮದ್ ಅಶ್ ರಖ್ ಖಾನ್, ಶ್ರೀನಗರದ ಡಾ. ಸೈಫುಲ್ಲಾ, ಬಾರಾಮುಲ್ಲಾದ ಮೆಹ್ರಾಜ್ ಉದ್ ದ್ದಿನ್, ಕುಪ್ವಾರಾದ ಅಜಾಜ್ ಅಹ್ಮದ್ ಮಲಿಕ್ ಮತ್ತು ಪುಲ್ವಾಮಾದ ಅರ್ಷೈದ್ ಉಲ್ ಹಕ್, ಲಷ್ಕರ್ ಎ ತೊಯ್ಬಾದ ವಾಸಿಂಗ್ ಅಹ್ಮದ್ ಅಲಿಯಾಸ್ ಒಸಾಮಾ, ಜೈಷ್ ಎ ಮೊಹಮ್ಮದ್ನ ಹಫೀಜ್ ಉಮರ್ ಮತ್ತು ಝಾಹೀದ್ ಶೇಖ್ ಈ ಪಟ್ಟಿಯಲ್ಲಿರುವ ಟಾಪ್ ಟೆನ್ ಉಗ್ರರಾಗಿದ್ದಾರೆ. .ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ನಿಟ್ಟಿನಲ್ಲಿ ಭದ್ರತಾಪಡೆಗಳು ಈ ಪಟ್ಟಿಯನ್ನು ಸಿದ್ಧಪಡಿಸಿದೆ.
ಇದಲ್ಲದೆ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸುಮಾರು 86 ಉಗ್ರರನ್ನು ಇಲ್ಲಿಯತಕ ಹೊಡೆದುರುಳಿಸಲಾಗಿದೆ, 20 ಉಗ್ರರನ್ನು ಬಂಧಿಸಲಾಗಿದೆ. ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ತಿಳಿಸಿದ್ದಾರೆ. ಉಗ್ರರ ವಿರುದ್ಧದ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.