ಬೆಂಗಳೂರು,ನ.08(DaijiworldNews/AK): ನಾನು ಯಾವಾಗಲೂ ದರ್ಶನ್ ಪರವಾಗಿ ಇದ್ದೇನೆ. ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ ಎಂದು ಮಾಜಿ ಸಂಸದೆ ಸುಮಲತಾ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಲಕ್ಷ್ಮಿ ಜೊತೆ ಸಂಪರ್ಕದಲ್ಲಿದ್ದೇನೆ. ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ದರ್ಶನ್ ಮುಂದೆ ಹಲವು ಸವಾಲುಗಳಿವೆ. ಇನ್ನೂ ಅವರಿಗೆ ಟ್ರೀಟ್ಮೆಂಟ್ ಬೇಕು, ಆರೋಗ್ಯ ಸರಿಪಡಿಸಿಕೊಳ್ಳಬೇಕು. ದರ್ಶನ್ಗೆ ಬೇಲ್ ಬಗ್ಗೆ ಕಾನೂನು ಸವಾಲುಗಳು ಇವೆ. ಅದನ್ನೆಲ್ಲಾ ಸರಿಪಡಿಸಿಕೊಂಡು ಹೊರಗಡೆ ಬರುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ನನ್ನ ನಿಲುವು ಏನು ಎಂಬುದನ್ನ ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದೇನೆ. ನಮ್ಮ ಸಂಬಂಧ ಏನಿದೆ ಅದು ಇನ್ನುಂದೆಯೂ ಹಾಗೆ ಇರುತ್ತದೆ. ಕೇಸ್ ಕುರಿತು ನಿಜಾಂಶ ಏನಿದೆ ಅದು ಹೊರಗೆ ಬರಬೇಕು. ನಿರಾಪರಾಧಿ ಅಂತಾ ಸಾಬೀತು ಆಗಲಿ ಎಂಬುದು ನನ್ನ ಆಸೆ ಎಂದರು.