ಹಿಮಾಚಲ ಪ್ರದೇಶ, ನ.09(DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ತರುಣಾ ಕಮಲ್ ಅವರ ಸ್ಫೂರ್ತಿದಾಯಕ ಕಥೆ ಇದು.
ತರುಣಾ ಕಮಲ್ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರು. ತರುಣಾ ಕಮಲ್ ಅವರ ತಂದೆ ಮುನ್ಸಿಪಾಲ್ ಕೌನ್ಸಿಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ತಾಯಿ ನಾರ್ಮಾ ದೇವಿ ಗೃಹಿಣಿ.
ತರುಣಾ ಅವರು ರಟ್ಟಿಯ ಮಾಡರ್ನ್ ಪಬ್ಲಿಕ್ ಸ್ಕೂಲ್ನಲ್ಲಿ 12 ನೇ ತರಗತಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಪಶುವೈದ್ಯಕೀಯ ವೈದ್ಯೆಯಾಗಿ ತರಬೇತಿಯನ್ನು ಮುಗಿಸಿದ ನಂತರ, ತರುಣಾ ಚಂಡೀಗಢದಲ್ಲಿ ಕೋಚಿಂಗ್ ತರಗತಿಗಳಿಗೆ ದಾಖಲಾಗುವ ಮೂಲಕ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
2023 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ತರುಣಾ ಅವರು, 203 ನೇ ರ್ಯಾಂಕ್ ಪಡೆಯುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಪ್ರಸ್ತುತ ಅವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತನಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವ ಆರಂಭದಲ್ಲಿ ಬಹಳ ಕಷ್ಟವಾಗಿತ್ತು. ಆದಾಗ್ಯೂ, ತನ್ನ ಪೋಷಕರು ಮತ್ತು ಕುಟುಂಬದ ಅಚಲ ಬೆಂಬಲದೊಂದಿಗೆ ಪರೀಕ್ಷೆಯ ತಯಾರಿಯತ್ತ ಗಮನ ಹರಿಸಲು ಸಾಧ್ಯವಾಯಿತು. ಅಂತಿಮವಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಸಾಧ್ಯವಾಯಿತು ಎಂದು ತರುಣಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.