ಇಂಫಾಲ್, ನ.12(DaijiworldNews/AA): ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಕನಿಷ್ಠ 11 ಶಂಕಿತ ಕುಕಿ ಬಂಡುಕೋರರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಅಸ್ಸಾಂ ಗಡಿಯಲ್ಲಿರುವ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಕೆಲವು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಶಂಕಿತ ಕುಕಿ ಉಗ್ರಗಾಮಿಗಳು ಜಿರಿಬಾಮ್ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ಎರಡು ಕಡೆಯಿಂದ ದಾಳಿ ನಡೆಸಿದಾಗ ಎನ್ಕೌಂಟರ್ ಆರಂಭವಾಯಿತು.
ದಾಳಿ ನಡೆದ ಪೊಲೀಸ್ ಠಾಣೆಯ ಪಕ್ಕದಲ್ಲಿ ನಿರಾಶ್ರಿತರ ಪರಿಹಾರ ಶಿಬಿರವಿದ್ದು, ಈ ಶಿಬಿರವನ್ನು ಗುರಿಯಾಗಿಕೊಂಡು ದಾಳಿಕೋರರು ದಾಳಿ ನಡೆಸಿರಬಹುದು. ಜಿರಿಬಾಮ್ನ ಬೊರೊಬೆಕ್ರಾದಲ್ಲಿನ ಪೊಲೀಸ್ ಠಾಣೆಯು ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಬಾರಿ ಗುರಿಯಾಗಿದೆ ಎಂದು ಮೂಲಗಳು ಹೇಳಿವೆ.
ದಾಳಿಕೋರರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ನಂತರ, ಶಂಕಿತ ಕುಕಿ ದಂಗೆಕೋರರು ಪೊಲೀಸ್ ಠಾಣೆಯಿಂದ ಒಂದು ಕಿ.ಮೀ ದೂರದಲ್ಲಿರುವ ಜಕುರಾಡೋರ್ ಕರೋಂಗ್ನಲ್ಲಿನ ಸಣ್ಣ ವಸಾಹತು ಕಡೆಗೆ ಚದುರಿದರು ಮನೆಗಳಿಗೆ ಮತ್ತು ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಿದರು. ಅದರ ಬಳಿಕ ಸಿಆರ್ಪಿಎಫ್ ಹೆಚ್ಚುವರಿ ಸೇನಾ ಪಡೆಗಳನ್ನು ಜಿರಿಬಾಮ್ಗೆ ಕಳುಹಿಸಿದೆ.