ಕೋಲಾರ, ಜೂ 04 (Daijiworld News/SM): ಮುಂಗಾರು ಮಳೆಯ ವಿಳಂಬದಿಂದಾಗಿ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮಂಗಳೂರಿನ ನೀರಿನ ಸಮಸ್ಯೆಗೆ ಎತ್ತಿನಹೊಳೆ ಕಾರಣವಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಯೋಜನೆ ವೇಗವಾಗಿ ಸಾಗುತ್ತಿದೆ. ಜೂನ್ 12 ರಂದು ಕಾಮಗಾರಿ ಪರಿಶೀಲನಾ ಕಾರ್ಯ ನಡೆಯಲಿದ್ದು, ಬಯಲುಸೀಮೆಯ ಎಲ್ಲಾ ಶಾಸಕರು ಕಾಮಗಾರಿಯನ್ನು ಪರಿಶೀಲನೆ ನಡೆಸುತ್ತಾರೆ ಎಂದರು.
ಮಂಗಳೂರಿನ ನೀರಿನ ಸಮಸ್ಯೆಗೂ ಎತ್ತಿನಹೊಳೆಗೂ ಸಂಬಂಧವಿಲ್ಲ. ಆದರೆ ಕೆಲವು ಹಿತಶತ್ರುಗಳು ಕಾಮಗಾರಿಗೆ ತಡೆಯೊಡ್ಡಲು ಮುಂದಾಗಿದ್ದಾರೆ. ಕಾಮಗಾರಿಯನ್ನು ವಿರೋಧಿಸುವವರು ನಮ್ಮ ವಿರೋಧಿಗಳಲ್ಲ, ನಮ್ಮ ಅಣ್ಣ-ತಮ್ಮಂದಿರು ಅವರಿಗೆ ನಮ್ಮ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದು ಎಂಬುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.