ಬಳ್ಳಾರಿ, ಜೂ 05 (Daijiworld News/MSP): ಮೈತ್ರಿ ಸರ್ಕಾರದ ಅಧಿಕಾರಕ್ಕೆ ಬಂದು ಒಂದು ವರ್ಷಗಳೇ ಕಳೆದಿದೆ ಆದರೆ ಇನ್ನು ಕೂಡಾ ಮೈತ್ರಿ ಸರ್ಕಾರದಲ್ಲಿ ಬಹುಮತದ ಗೊಂದಲ ಇರೋದು ವಿಷಾದನೀಯ. ರಾಜ್ಯದ ಜನರಿಗೆ ಉತ್ತಮ ಆಡಳಿತ ಸಿಗಬೇಕು ಎಂದರೆ, ಮೂರು ಪಕ್ಷಗಳು ಕೂಡಾ ಒಗ್ಗಟ್ಟಾಗಬೇಕು. ಈ ಪಕ್ಷಗಳಲ್ಲಿ ಬೇರುಬಿಟ್ಟಿರುವ ಎಡಪಂಥೀಯ- ಬಲಪಂಥೀಯ ವಿಂಗಡಣೆಗಳನ್ನು ಬಿಟ್ಟು ಮೂರೂ ಪಕ್ಷಗಳು ಜತೆಗೂಡಿದ್ರೆ ಮಾತ್ರ ಇವರ ನಡುವೆ ಇರೋ ಗೊಂದಲಗಳು ಬಗೆಬಹರಿಯುತ್ತವೆ. ಇಲ್ಲಿ ಕಾಂಗ್ರೆಸ್ ಜೆಡಿಎಸ್ ನಂತೆ ಬಿಜೆಪಿ ಪಕ್ಷ ಕೂಡಾ ಸಂವಿಧಾನವನ್ನು ಪಾಲಿಸುತ್ತದೆ. ಅದೂ ಕೂಡಾ ಜಾತ್ಯತೀತ ಪಕ್ಷ. ಹೀಗಾಗಿ ಮೂರು ಪಕ್ಷಗಳು ಸೇರಿ ರಾಜ್ಯದಲ್ಲಿ ಅಧಿಕಾರ ನಡೆಸಬೇಕು ಎಂದು ಪ್ರತಿಪಾದಿಸಿದರು.
ನಗರದ ಕೃಷ್ಣ ಮಠದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಮ ಮಂದಿರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಬಿಜೆಪಿ ಸರ್ಕಾರದ 5 ವರ್ಷಗಳ ಅವಧಿ ಮುಗಿಯುವುದರೊಳಗೆ ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಇಲ್ಲಿತನಕ ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ. ಅದು ಮುಂದಿನ ವರ್ಷ ದೊರಕುವ ವಿಶ್ವಾಸ ಇದೆ. ಆ ಬಳಿಕ ರಾಮ ಮಂದಿರ ನಿರ್ಮಾಣ ಖಂಡಿತವಾಗಿ ಆಗುತ್ತದೆ. 5 ವರ್ಷಗಳ ಕಾಲ ಬಿಜೆಪಿ ಸರ್ಕಾರವೇ ಇರುತ್ತದೆ. ಸುಪ್ರೀಂ ಕೋರ್ಟ್ ಕೂಡ ಮಂದಿರ ನಿರ್ಮಾಣದ ಪರವಾಗಿಯೇ ತೀರ್ಪು ನೀಡುವ ನಿರೀಕ್ಷೆ ಇದೆ ಎಂದರು.