ನವದೆಹಲಿ, ನ.18(DaijiworldNews/TA): ಐಎಎಸ್ ಅಧಿಕಾರಿ ಎಂ ಶಿವಗುರು ಪ್ರಭಾಕರನ್ ಅವರ ಜೀವನ ಕಥೆ ಪ್ರಸ್ತುತ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವವರಿಗೆ ಭರವಸೆಯ ಬೆಳಕು. ಶಿವಗುರು ಸ್ಪೂರ್ತಿದಾಯಕ ಕಥೆ ಇದು.
ಪ್ರಭಾಕರನ್ ಅವರ ತನ್ನ ತಂದೆಯ ವ್ಯತಿರಿಕ್ತ ವರ್ತನೆಯಿಂದ ಬೇಸತ್ತು ತನ್ನ ಅಧ್ಯಯನವನ್ನು ಬಿಡಲು ನಿರ್ಧರಿಸಿ ತನ್ನ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಗರಗಸದ ಕಾರ್ಖಾನೆಯ ನಿರ್ವಾಹಕರಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದ ಅವರು ತಮ್ಮ ಸಹೋದರಿಯ ಮದುವೆಯನ್ನು ಮಾಡಿ ಮತ್ತು ಅವರ ಕುಟುಂಬಕ್ಕೆ ಮೂಲಭೂತ ಅವಶ್ಯಕತೆಗಳನ್ನು ನೀಡಿ ಕುಟುಂಬವನ್ನು ಭದ್ರಪಡಿಸಿದ ಶ್ರಮ ಜೀವಿ ಶಿವಗುರು. ಈ ಸವಾಲುಗಳ ಹೊರತಾಗಿಯೂ, ಶಿಕ್ಷಣವು ಅವರ ಅಗ್ರಗಣ್ಯ ಆದ್ಯತೆಯಾಗಿ ಉಳಿಯಿತು. ಆರಂಭದಲ್ಲಿ ತನ್ನ ಶೈಕ್ಷಣಿಕ ಆಕಾಂಕ್ಷೆಗಳನ್ನು ಬದಿಗಿಡಲು ನಿರ್ಧರಿಸಿದ್ದ ಅವರು ಐಎಎಸ್ ಅಧಿಕಾರಿಯಾಗಬೇಕೆಂಬ ತಮ್ಮ ಬಾಲ್ಯದ ಕನಸಿಗೆ ಸದಾ ನೀರೆರೆಯುತ್ತಿದ್ದರು.
ಪ್ರಭಾಕರನ್ ಅವರು ಕೊನೆಗೂ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ವೆಲ್ಲೂರಿನ ಗೌರವಾನ್ವಿತ ತಂಥೈ ಪೆರಿಯಾರ್ ಸರ್ಕಾರಿ ತಂತ್ರಜ್ಞಾನ ಸಂಸ್ಥೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ತನ್ನ ಅಧ್ಯಯನ ಮತ್ತು ಜವಾಬ್ದಾರಿಗಳನ್ನು ಸಮತೋಲನದಲ್ಲಿಟ್ಟುಕೊಂಡು, ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು.
ಅವರ ನಿರಂತರ ಜ್ಞಾನದ ಅನ್ವೇಷಣೆಯು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಮದ್ರಾಸ್ಗೆ (IIT-M) ಪ್ರವೇಶವನ್ನು ಗಳಿಸಿತು. ಪದವಿಯ ನಂತರ ಲಾಭದಾಯಕ ಕಾರ್ಪೊರೇಟ್ ಉದ್ಯೋಗವನ್ನು ಆಯ್ಕೆ ಮಾಡುವ ಬದಲು, ಪ್ರಭಾಕರನ್ ಸವಾಲಿನ ಯುಪಿಎಸ್ಸಿ ಪರೀಕ್ಷೆಯತ್ತ ದೃಷ್ಟಿ ನೆಟ್ಟರು.
ಆದಾಗ್ಯೂ, UPSC ಯಶಸ್ಸಿನ ಹಾದಿಯು ಹಿನ್ನಡೆಯಿಂದ ಕೂಡಿತ್ತು. ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಅವರು, ತಮ್ಮ ನಾಲ್ಕನೇ ಪ್ರಯತ್ನದಲ್ಲಿ 101 ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ತಮ್ಮ ಐಎಎಸ್ ಅಧಿಕಾರಿ ಆಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.