ಜಮ್ಮು-ಕಾಶ್ಮೀರ, ಜೂ 05 (Daijiworld News/MSP): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ರಂಜಾನ್ ಹಬ್ಬದ ದಂದೇ ಭಯೋತ್ಪಾದಕರು ಮಹಿಳೆಯೊಬ್ಬಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಗ್ರರು ಪುಲ್ವಾಮಾ ಜಿಲ್ಲೆಯ ಸಿಂಗೂ-ನರ್ಬಾಲ್ ಪ್ರದೇಶದಲ್ಲಿ ಉಗ್ರರು ಒಬ್ಬ ಪುರುಷ ಹಾಗೂ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದರು. ಮಹಿಳೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದರೆ, ಗಾಯಗೊಂಡ ಪುರುಷನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದರು.
ಮೃತಪಟ್ಟ ಮಹಿಳೆಯನ್ನು ನಗೀನಾ ಬಾನೂ ಎಂದು ಗುರುತಿಸಲಾಗಿದೆ. ಉಗ್ರರು ಈಕೆಯ ಮನೆಯೊಳಗೆ ಹೋಗಿ ಗುಂಡುಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡತಾನನ್ನು ಮೊಹಮ್ಮದ್ ಸುಲ್ತಾನ್ ಎಂದು ಗುರುತಿಸಲಾಗಿದೆ.