ನವದೆಹಲಿ, ಜೂ 05 (Daijiworld News/MSP): ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಯೋಗಾಸನದ ಅನಿಮೇಟೆಡ್ ವೀಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಅನಿಮೇಟೆಡ್ ವಿಡಿಯೊದಲ್ಲಿ ನರೇಂದ್ರ ಮೋದಿ ತ್ರಿಕೋನಾಸನ ಮಾಡುವ ದೃಶ್ಯವಿದೆ.

ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತ್ರಿಕೋನಾಸನ ಮಾಡುತ್ತಿರುವ ಅನಿಮೇಟೆಡ್ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಯೋಗದ ಮಹತ್ವವನ್ನು ಮತ್ತೆ ಪ್ರತಿಪಾದಿಸಿದ್ದಾರೆ.
ಕಳೆದ ಬಾರಿಯೂ ತಾವು ಯೋಗ ಮಾಡುತ್ತಿರುವ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಯೋಗದ ಮಹತ್ವ ಸಾರಿದ್ದರು. ಆದರೆ ಈ ಬಾರಿ ತಮ್ಮ ಅನಿಮೇಟೆಡ್ ವಿಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವುದಲ್ಲದೆ ಇನ್ನೊಬ್ಬರಿಗೂ ಪ್ರೇರಣೆ ನೀಡಬೇಕು. ಆರೋಗ್ಯಕ್ಕೆ ಯೋಗದ ಕೊಡುಗೆಇದೆ. ತ್ರಿಕೋನಾಸನದ ಬಗ್ಗೆ ವಿಡಿಯೊ ಇಲ್ಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.