ರಾಜಸ್ಥಾನ, ನ.19(DaijiworldNews/AK): ಯುಪಿಎಸ್ ಸಿ 2023 ರ ಫಲಿತಾಂಶದಲ್ಲಿ, ಕರೌಲಿಯ ಯೋಗೇಶ್ ಮೀನಾ ಅವರು 66 ನೇ ರ್ಯಾಂಕ್ ಪಡೆಯುವ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ. ಯುಎಸ್ಎನಲ್ಲಿ ಲಕ್ಷಗಳ ಸಂಬಳದ ಉದ್ಯೋಗ ಬಿಟ್ಟು ಭಾರತಕ್ಕೆ ಬಂದ ಯೋಗೇಶ್ ಮೀನಾ ಅವರ ಸಾಧನೆಯ ಕಥೆಯನ್ನು ತಿಳಿಯೋಣ.
ಯೋಗೇಶ್ ಮೀನಾ ಅವರು ರಾಜಸ್ಥಾನದ ಕರೌಲಿ ಜಿಲ್ಲೆಯವರು. ಆದರೆ ಓದಿದೆಲ್ಲ ಮುಂಬೈನಲ್ಲಿ. ಅವರ ತಂದೆ ಮುಂಬೈನಲ್ಲಿ ಕಸ್ಟಮ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಮುಂಬೈನಲ್ಲಿ ಯೋಗೇಶ್ ಅವರು ಐಐಟಿ ಬಾಂಬೆಯಿಂದ ಕಂಪ್ಯೂಟರ್ ನಲ್ಲಿ ಪದವಿ ಪಡೆದರು. ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು 2020 ರಲ್ಲಿ 70 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೆಜ್ ನೊಂದಿಗೆ ಅಮೇರಿಕನ್ ಕಂಪನಿಯಲ್ಲಿ ಸ್ಥಾನ ಪಡೆದರು.
ಆದರೆ ಮೊದಲಿನಿಂದಲೂ ಅವರ ಆಸೆ ಆಡಳಿತ ಸೇವೆಯಲ್ಲಿ ಕೆಲಸ ಮಾಡುವುದು ಆಗಿತ್ತು. ಹೀಗಾಗಿ ಭಾರತಕ್ಕೆ ಬಂದ ನಂತರ ಅವರು 2022 ರಲ್ಲಿ ಮುಂಬೈನಲ್ಲಿ ಕೋಚಿಂಗ್ ತೆಗೆದುಕೊಳ್ಳುವ ಮೂಲಕ UPSC ಗೆ ತಯಾರಿ ನಡೆಸಿದರು. ಮೊದಲು ಯೋಗೇಶ್ 2022ರ ಸಿವಿಲ್ ಸರ್ವೀಸಸ್ ಪರೀಕ್ಷೆ ಬರೆದರು. ಆದರೆ ಮೊದಲ ಪ್ರಯತ್ನದಲ್ಲಿ ಸೋತರೂ ಛಲ ಬಿಡದೆ ಎರಡನೆ ಪ್ರಯತ್ನದಲ್ಲಿ ಪರಿಶ್ರಮ ಪಟ್ಟು ಯೋಗೇಶ್ 2023 ರ ಫಲಿತಾಂಶದಲ್ಲಿ ಯಶಸ್ಸನ್ನು ಪಡೆದರು. ಎರಡನೇ ಪ್ರಯತ್ನದಲ್ಲಿ 66ನೇ ಸ್ಥಾನ ಪಡೆಯುವ ಮೂಲಕ ಸಿವಿಲ್ ಸರ್ವಿಸಸ್ ನಲ್ಲಿ ಯಶಸ್ಸು ಗಳಿಸಿದರು.
ಯೋಗೇಶ್ ಮೀನಾ ಅವರು 2023 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 66ನೇ ರ್ಯಾಂಕ್ ಗಳಿಸುವ ಮೂಲಕ ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.