ದಾವಣಗೆರೆ, ನ.20(DaijiworldNews/AA): ಬಿಜೆಪಿ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾಲದಲ್ಲಿ ಯಂತ್ರೋಪಕರಣಗಳನ್ನು ಖರೀದಿ ಮಾಡದೇ ಹಣ ತಿಂದು ಹಾಕಿದ್ದಾರೆ. ಆಗ ಬಿಜೆಪಿ ಮಾಡಿದ ಅವ್ಯವಹಾರ ಈಗ ಬೆಳಕಿಗೆ ಬರುತ್ತಿವೆ ಎಮದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೋವಿಡ್ ಕಾಲದಲ್ಲಿ ಎಲ್ಲರಿಗೂ ಲಸಿಕೆ ಕೊಡಲು ಆಗಿಲ್ಲ. ನಾವು ನಮ್ಮ ಕುಟುಂಬದಿಂದ 6 ಕೋಟಿ ರೂ. ವೆಚ್ಚದಲ್ಲಿ ಕೋವಿಡ್ ಲಸಿಕೆ ವಿತರಿಸಿದ್ದೆವು. ಇದೇ ಕಾರಣಕ್ಕೆ 40% ಭ್ರಷ್ಟಚಾರ ಎಂದು ನಾವು ಬಿಜೆಪಿ ಸರ್ಕಾರವನ್ನ ಕರೆದಿದ್ದೆವು. ಈಗ ನಮ್ಮ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಯಾವ ನೈತಿಕತೆ ಕೂಡ ಇಲ್ಲಾ ಎಂದು ಅವರು ಕಿಡಿಕಾರಿದ್ದಾರೆ.