ನವದೆಹಲಿ , ಜೂ05(Daijiworld News/SS): ಗುಪ್ತಚರ ಇಲಾಖೆ, ಸೇನೆ ಹಾಗೂ ಕಾಶ್ಮೀರಿ ಪೊಲೀಸರ ಮೂಲಕ ಪ್ರಮುಖ 10 ಉಗ್ರರ ಮಾಹಿತಿ ಪಡೆದುಕೊಂಡಿರುವ ಗೃಹಸಚಿವ ಅಮಿತ್ ಶಾ, ಅವರನ್ನು ಮಟ್ಟಹಾಕಿ ಎಂದು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕಲು ನಿರ್ಧರಿಸಿರುವ ನೂತನ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿರುವ ಪ್ರಮುಖ 10 ಉಗ್ರರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕೇಂದ್ರದಲ್ಲಿನ ಎನ್ ಡಿಎ ಸರ್ಕಾರ, ಕಳೆದ ಐದು ವರ್ಷಗಳಲ್ಲಿ ಭಯೋತ್ಪಾದಕರ ವಿರುದ್ಧ ತೋರಿದ ಕಠಿಣ ಧೋರಣೆಗಳಿಂದಾಗಿ ಭಯೋತ್ಪಾದಕರ ಉಪಟಳ ಕೇವಲ ಈಗ ರಾಜ್ಯದ 4 ಜಿಲ್ಲೆಗಳಿಗೆ ಸೀಮಿತವಾಗಿದೆ. ಅಲ್ಲಿಂದಲೂ ಉಗ್ರರನ್ನು ಹೊರದಬ್ಬಲು ಗೃಹ ಸಚಿವ ಅಮಿತ್ ಶಾ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ರೀತಿಯ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ವಿಷಯ ಕುರಿತು ಕೇಂದ್ರ ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದರು.