ಶಿವಮೊಗ್ಗ, ಜೂ05(Daijiworld News/SS): ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯಲ್ಲೇ ಈ ಬಾರಿ ಮಳೆ ಕೊರತೆಯುಂಟಾಗಿದೆ ಎಂದು ತಿಳಿದುಬಂದಿದೆ.
2018ಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆಗುಂಬೆಯಲ್ಲಿ ಮಳೆ ಪ್ರಮಾಣ ತೀವ್ರ ಪ್ರಮಾಣದಲ್ಲಿ ಕುಗ್ಗಿದ್ದು, ಕಳೆದ ಜನವರಿಯಿಂದ ಈ ವರೆಗೂ ಆಗುಂಬೆಯಲ್ಲಿ ಕೇವಲ 5 ಸೆಂಮೀ ಮಳೆಯಾಗಿದೆ
ಕಳೆದ ವರ್ಷ ಈ ಹೊತ್ತಿಗೆ 27 ಸೆಂಮೀ ಮಳೆಯಾಗಿತ್ತು. ಅರಣ್ಯ ನಾಶವೇ ಮಳೆ ಕೊರತೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.
ಹವಾಮಾನ ಇಲಾಖೆಯ ದತ್ತಾಂಶಗಳ ಪ್ರಕಾರ, ಆಗುಂಬೆಯಲ್ಲಿನ ಮಳೆ ಕಾಡುಗಳಲ್ಲಿ 5 ಪಟ್ಟಿಗಿಂತ ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಮೇ ತಿಂಗಳ ಹೊತ್ತಿಗೆ 20 ಸೆಂಮೀ ಮಳೆಯಾಗಿತ್ತು. 2016ರಲ್ಲಿ 6,151.7 ಮಿಮೀ ಮಳೆಯಾಗಿದ್ದರೆ, 2017ರಲ್ಲಿ 6,276.4 ಮಿ,ಮೀ ಮಳೆಯಾಗಿತ್ತು. 2018ರಲ್ಲಿ 8,208.9ಮಿ ಮೀ ಮಳೆಯಾಗಿದೆ. ಅಂತೆಯೇ ಇಲ್ಲಿ ಸರಾಸರಿ 7,624.2 ಮಿಮೀ ಮಳೆಯಾಗುತ್ತದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.