ಮಂಡ್ಯ, ,ನ.24(DaijiworldNews/AK):ಡಿಕೆ ಶಿವಕುಮಾರ್ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಗತಿಯಿಲ್ಲದೇ ಬಿಜೆಪಿಯಿಂದ ಕರೆದುಕೊಂಡು ಕೈ ಅಭ್ಯರ್ಥಿ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

ಚನ್ನಪಟ್ಟಣ ಗೆಲುವಿಗೆ ಬಿಜೆಪಿ ಸಪೋರ್ಟ್ ಕಾರಣ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗೆದ್ದಿದ್ದೇವೆ ಎಂದು ಕಾಂಗ್ರೆಸ್ನವರು ಬೀಗುತ್ತಿದ್ದಾರೆ. ಆದರೆ ಈ ಗೆಲುವು ಶಾಶ್ವತ ಅಲ್ಲ. ನಾವು ಉಪ ಚುನಾವಣೆಯಲ್ಲಿ 18 ಕ್ಷೇತ್ರದಲ್ಲಿ ಗೆದ್ದವರು. ಇವರು 3 ಗೆದ್ದೇ ಹೀಗೆ ಮೆರೆಯುತ್ತಿದ್ದಾರೆ. 18 ಉಪ ಚುನಾವಣೆಯಲ್ಲಿ ಗೆದ್ದ ನಾವು ಹೇಗೆ ಮೆರೆಯಬೇಕು ಎಂದು ಕಿಡಿಕಾರಿದ್ದಾರೆ.
ಲೋಕಸಭಾ ಎಲೆಕ್ಷನ್ನಲ್ಲಿ ಯಾಕೆ ಮಣ್ಣು ಮುಕ್ಕಿದ್ರಿ? ಡಿಕೆಶಿ, ಸಿದ್ದರಾಮಯ್ಯ ಚುನಾವಣೆ ಅಲ್ಲ. ಇದು ಹಣದ ಚುನಾವಣಾ ಗೆಲುವು. ನಿಮ್ಮ ಪರಿಶ್ರಮದಿಂದ ಗೆದ್ದಿಲ್ಲ. ಜೆಡಿಎಸ್-ಬಿಜೆಪಿ ಪೂರ್ತಿ ಮನಸ್ಸಿಂದ ಚುನಾವಣೆ ನಡೆಸಿದ್ದೇವೆ. ಆದ್ರೆ ನಿಖಿಲ್ಗೆ ಅದೃಷ್ಟ ಇರಲಿಲ್ಲ. ನಿಖಿಲ್ಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು
ಇದೇ ವೇಳೆ ಡಿಕೆ ಸುರೇಶ್ ಸೋಲೋದಕ್ಕೆ ಸಿದ್ದರಾಮಯ್ಯ ಕಾರಣ ಅಲ್ವಾ? ಅದನ್ನ ಡಿಕೆಶಿ ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.