ಬೆಂಗಳೂರು ,ಜೂ 6 (Daijiworld News/MSP): ದೇಶದ 17 ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಇರುವಂತೆ ಕರ್ನಾಟಕದಲ್ಲೂ ಶನಿವಾರ ರಜೆ ನೀಡಬೇಕು ಎನ್ನುವ ಎನ್ನುವ ಕೂಗಿದೆ ಸರ್ಕಾರ ಸ್ಪಂದಿಸಿದೆ. ಈ ನಡುವೆ ರಾಜ್ಯದ ಸರ್ಕಾರಿ ನೌಕರರಿಗೆ ವಾಲ್ಮೀಕಿ ಜಯಂತಿ, ಕನಕ ಜಯಂತಿ, ಬಸವ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ವಿುಲಾದ್, ಕಾರ್ವಿುಕ ದಿನ, ಗುಡ್ಫ್ರೈಡೆ. ಕಾರ್ವಿುಕ ದಿನದ ರಜೆಯನ್ನು ರದ್ದುಗೊಳಿಸುವ ತೀರ್ಮಾನವನ್ನು ಸರ್ಕಾರ ಕೈಬಿಟ್ಟಿದೆ.
17 ರಾಜ್ಯಗಳಲ್ಲಿ ಪ್ರತಿ ಶನಿವಾರ ಹಾಗೂ 4 ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಆದರೆ ಈ ರಾಜ್ಯಗಳಲ್ಲಿ ನಮ್ಮ ರಾಜ್ಯದಲ್ಲಿ ಇರುವ 'ಜಯಂತಿ' ಗಳ ಮತ್ತು ಮಹಾಲಯ ಅಮಾವಾಸ್ಯೆ, ಈದ್ವಿುಲಾದ್, ಕಾರ್ವಿುಕ ದಿನ, ಗುಡ್ಫ್ರೈಡೆ ಕಾರ್ವಿುಕ ದಿನದಂದು ರಜೆ ಇರೋದಿಲ್ಲ. ಹಾಗಾಗಿ ನಮ್ಮ ರಾಜ್ಯದಲ್ಲೂ ಈ ರಜೆಗಳನ್ನು ರದ್ದುಗೊಳಿಸಿ, ಕಾಯಕವೇ ಕೈಲಾಸ ಎಂಬ ಸಂದೇಶ ಸಾರಿದ ಬಸವ ಜಯಂತಿಯಂದು ರಜೆ ನೀಡದೆ ಅಂದು ಒಂದು ತಾಸು ಹೆಚ್ಚು ಕೆಲಸ ಮಾಡಿಸಬೇಕು ಎಂದು ಹಲವು ಸಂಘಟನೆಗಳು ಆಗ್ರಹಿಸಿದ್ದವು. ಮಾತ್ರವಲ್ಲದೆ ಇದರ ಬದಲು ಎರಡನೇ ಶನಿವಾರದಂತೆ ನಾಲ್ಕನೇ ಶನಿವಾರವೂ ರಜೆ ನೀಡಬೇಕು ಎಂದು ಆಗ್ರಹಿಸಿದ್ದವು
ಈ ಹಿನ್ನಲೆಯಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಜಯಂತಿಗಳಿಗೆ ರಜೆ ರದ್ದುಗೊಳಿಸುವ ವಿಚಾರವನ್ನು ಕೈಬಿಡಲಾಗಿದೆ. ಕ್ಯಾಸ್ಯುವಲ್ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆಗೆ ನಿರ್ಧಾರ ಮಾಡಲಾಗಿದೆ. ಎಲ್ಲ ಇಲಾಖೆ ಹಾಗೂ ಶಾಲಾ ಕಾಲೇಜುಗಳಿಗೂ ಇದು ಅನ್ವಯ ಆಗಲಿದೆ. ಆದರೆ, ಇದು ಮುಂದಿನ ವರ್ಷದಿಂದಲೇ ಅಥವಾ ಈ ವರ್ಷದಿಂದಲೇ ಜಾರಿಯಾಗುತ್ತಾ ಅನ್ನೋದು ಇನ್ನಷ್ಟೇ ತೀರ್ಮಾನ ಆಗಬೇಕು ಎಂದು ಕೃಷ್ಣಭೈರೇಗೌಡ ಹೇಳಿದರು.