ಬೆಂಗಳೂರು, ಜೂ06(Daijiworld News/SS): ರಾಜ್ಯದಲ್ಲಿ ಜಾತ್ಯತೀತ ಜನತಾದಳದೊಡನೆ ಮೈತ್ರಿ ಮಾಡಿಕೊಂಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ. ಜನರು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಂಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಜನರು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಂಡಿಲ್ಲ. ಚುನಾವಣೆಗೂ ಮುನ್ನ ಈ ಕುರಿತು ನಾನು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಲು ಯತ್ನಿಸಿದೆ. ಆದರೆ, ಅವರು ಈ ಕುರಿತು ಯೋಚಿಸದೆ ಮತ್ತು ಮತ್ತು ಜೆಡಿಎಸ್ ಹೇಳುವುದನ್ನೇ ಕೇಳುತ್ತಾ ಹೋದರು. ರಾಜ್ಯದಲ್ಲಿ ಜಾತ್ಯತೀತ ಜನತಾದಳದೊಡನೆ ಮೈತ್ರಿ ಮಾಡಿಕೊಂಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ. ಮೈತ್ರಿಯಿಂದ ಅವರು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೇಳಿದರು.
ಹಲವಾರು ಕ್ಷೇತ್ರಗಳಲ್ಲಿ ಗೆಲ್ಲುವಂತಹ ಉತ್ತಮ ಅಭ್ಯರ್ಥಿಗಳು ಕಾಂಗ್ರೆಸ್ನಲ್ಲಿದ್ದರು ಮತ್ತು ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಕೂಡ ಹೊಂದಿತ್ತು. ಆದರೆ, ಅವರು ಬಿಜೆಪಿ ಗೆಲ್ಲಲು ಸುಲಭ ದಾರಿಯನ್ನು ಮಾಡಿಕೊಟ್ಟರು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಚುನಾವಣೆ ಎದುರಿಸಿದ್ದರೆ ಕನಿಷ್ಠ ಹತ್ತು ಸ್ಥಾನಗಳನ್ನಾದರೂ ಗಳಿಸುತ್ತಿತ್ತು. ಕಾಂಗ್ರೆಸ್ ತಾನು ಗೆಲ್ಲಬಹುದಾಗಿದ್ದ ಹಲವಾರು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ ಎಂದು ಹೇಳಿದರು.