ಬೆಂಗಳೂರು,ಡಿ.02(DaijiworldNews/AA): ಫೆಂಗಲ್ ಚಂಡಮಾರುತ ಎಫೆಕ್ಟ್ ಕರ್ನಾಟಕಕಕ್ಕೂ ತಟ್ಟಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿತಿರುವ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ.

ಬೆಂಗಳೂರು ಮಾತ್ರವಲ್ಲದೇ ಫೆಂಗಲ್ ಪರಿಣಾಮದಿಂದ ದಕ್ಷಿಣ ಕನ್ನಡ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಆಗುತ್ತಿದೆ. ಕೊಡಗಿನ ಜೊತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ರೆಡ್ ಅಲರ್ಟ್ – ಕೊಡಗು, ಆರೆಂಜ್ ಅಲರ್ಟ್ – ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ರಾಮನಗರ, ಯೆಲ್ಲೋ ಅಲರ್ಟ್ – ಮಂಡ್ಯ, ಹಾಸನ ಘೊಷಿಸಲಾಗಿದೆ.