ಮೈಸೂರು, ಡಿ.02(DaijiworldNews/AK): ರಾಜ್ಯದಲ್ಲಿ ವಕ್ಫ್ ಬೋ ರ್ಡ್ ಕ್ಯಾನ್ಸರ್ ನಂತೆ ಬಡವರ ಜಮೀನು ನುಂಗುತ್ತಿದೆ. ಕಾಂಗ್ರೆಸ್ ಸರ್ಕಾ ರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತ ಬಹುಸಂಖ್ಯಾತರನ್ನು ನಿರ್ಲಕ್ಷ್ಯ ಮಾಡಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟರೇ ಸರ್ಕಾರವೇ ಹೊಣೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ವಕ್ಫ್ ಹೆಸರಿಗೆ ದಾಖಲೆ ಬದಲಾವಣೆ ಆಗಿರುವ ಜಮೀನುಗಳ ಸಂತ್ರಸ್ಥರ ಸಮಸ್ಯೆ ಆಲಿಸಲು ಬಿಜೆಪಿ ತಂಡವು ಮೈಸೂರಿಗೆ ಸೋಮವಾರ ಭೇಟಿ ನೀಡಿದ್ದು, ಈ ಸಂದರ್ಭ ಸುದ್ದಿಗೋ ಷ್ಠಿಯಲ್ಲಿ ಅವರು ಮಾತನಾಡಿ, ಮೈಸೂರಿನ ಮುನೇಶ್ವರ ನಗರ ಮುಲ್ಲಾ ನಗರವಾಗಿ ಬದಲಾಗಿದ್ದು, ಇಲ್ಲಿನ ಬಸವಣ್ಣನ ಮಠದ ಆಸ್ತಿಯನ್ನೂ ವಕ್ಫ್ ನುಂಗುತ್ತಿದೆ. ದೇಗುಲ- ಮಠ, ಶ್ರೀ ಸಾಮಾನ್ಯರ ಆಸ್ತಿಗೆ ಕಿಂಚಿತ್ತು ಧಕ್ಕೆಯಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ವಕ್ಫ್ ಕಾಯ್ದೆಗೆ ಕೇಂದ್ರ ಎನ್ಡಿಎ ಸರ್ಕಾರ ತಿದ್ದುಪಡಿ ತರುತ್ತಿದ್ದು, ಆದಷ್ಟು ಶೀಘ್ರ ಇದನ್ನು ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.