ನವದೆಹಲಿ,ಡಿ.03(DaijiworldNews/AK): ಬಿಜೆಪಿ ಶಾಸಕ ಯತ್ನಾಳ್ ಅವರಿಗೆ ಪಕ್ಷದ ಶಿಸ್ತು ಸಮಿತಿ ನೊಟೀಸ್ ಕೊಟ್ಟ ಬೆನ್ನಲ್ಲೇ ಯತ್ನಾಳ್ ಟೀಂ ದೆಹಲಿಗೆ ತೆರಳಿದೆ. ಹೈಕಮಾಂಡ್ ಭೇಟಿಗೂ ಮುನ್ನ ಬಣದ ನಾಯಕರು ಸಭೆ ನಡೆಸಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ.ಪಿ ಹರೀಶ್, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಅವರ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಯತ್ನಾಳ್ ಅವರಿಗೆ ನೋಟಿಸ್ ಕೊಡ್ತಾರೆ ಅಂದ್ರೆ ಇವರಿಗೂ ನೋಟಿಸ್ ಕೊಡಬೇಕು. ಕೆಜೆಪಿಯಿಂದ ಹೋದವರಿಗೂ ಯಡಿಯೂರಪ್ಪ ಏನು ಮಾಡಿಲ್ಲ. ವಿಜಯೇಂದ್ರ ಚೇಲಾಗಳು ಬಿಜೆಪಿ ನಡೆಸುತ್ತಿದ್ದಾರೆ. ಭ್ರಷ್ಟ ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಅವರು ಕಿಡಿಕಾರಿದ್ದಾರೆ.
ಇನ್ನೂ ಯತ್ನಾಳ್ ಅವರಿಗೆ ನೊಟೀಸ್ ಕೊಟ್ಟ ವಿಚಾರಚಾಗಿ ಮಾತನಾಡಿದ ರಮೇಶ್ ಜಾರಕಿಹೊಳಿ, ಎರಡು ದಿನದ ಹಿಂದೆ ನೊಟೀಸ್ ಕೊಟ್ಟ ವಿಚಾರ ಗೊತ್ತಾಗಿದೆ. ಅದಕ್ಕೆ ಯತ್ನಾಳ್ ಉತ್ತರ ಕೊಡ್ತಾರೆ. ಬುಧವಾರ ಹೈಕಮಾಂಡ್ ಭೇಟಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ.