ಮುಂಬೈ, ಜೂ 06 (Daijiworld News/SM): ಸಂವಿಧಾನದ 370 ವಿಧಿ ರದ್ದುಪಡಿಸುವ ನಿಲುವನ್ನು ಶಿವೇಸೇನೆ ಪುನರ್ ಉಚ್ಚರಿಸಿದೆ. ಅಲ್ಲದೆ ಕಾಶ್ಮೀರವನ್ನು ಮುಸ್ಲಿಂರಿಗೆ ಗಿಫ್ಟ್ ಆಗಿ ನೀಡುವುದಿಲ್ಲ ಎಂದು ಹೇಳಿದೆ.
ಜಮ್ಮು- ಕಾಶ್ಮೀರದಲ್ಲಿ ಶೇ, 68.35 ರಷ್ಟು ಜನರು ಮುಸ್ಲಿಂರಿದ್ದರೆ, ಶೇ.28. 45 ರಷ್ಟು ಮಂದಿ ಹಿಂದೂಗಳಿದ್ದಾರೆ. ಮುಸಲ್ಮಾನರ ಸಂಖ್ಯೆ ಹೆಚ್ಚಿದೆ ಎನ್ನುವ ಮಾತ್ರಕ್ಕೆ ಅವರಿಗೆ ಕಾಶ್ಮೀರವನ್ನು ಗಿಫ್ಟ್ ಆಗಿ ನೀಡುವುದಿಲ್ಲ ಎಂದು ಪುನರುಚ್ಚರಿಸಿದೆ.
370 ನೇ ವಿಧಿಯನ್ನು ರದ್ದುಗೊಳಿಸಿ ದೇಶದಲ್ಲಿರುವ ಕಾನೂನನ್ನು ಅಲ್ಲಿಗೂ ವಿಸ್ತರಿಸಬೇಕೆಂದು ಶಿವಸೇನಾ ಮುಖವಾಣಿ ಸಾಮ್ಲಾದಲ್ಲಿ ಹೇಳಲಾಗಿದೆ. ಸಂವಿಧಾನ 370ನೇ ವಿಧಿಯಲ್ಲಿ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ.