ಮಲ್ಲಾಪುರಂ, ಜೂ07(Daijiworld News/SS): ಕೇವಲ ವಯನಾಡು ಮಾತ್ರವಲ್ಲದೇ ಕೇರಳ ಜನರ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಅಭೂತಪೂರ್ವಕ ರೀತಿಯಲ್ಲಿ ಬೆಂಬಲಿಸಿದ್ದೀರಿ. ನಾನು ಕೇರಳದ ಸಂಸದನಾಗಿ ವಯನಾಡು ಮಾತ್ರವಲ್ಲ, ಕೇರಳ ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದು ತಮ್ಮ ಜವಾಬ್ದಾರಿಯಾಗಿದೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಿಮ್ಮ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ವಯನಾಡಿನ ಪ್ರತಿಯೊಬ್ಬ ನಾಗರಿಕರ ಸಂಪರ್ಕಕ್ಕೂ ಸಿಗುತ್ತೇನೆ. ವಯನಾಡು ಜನರ ಸಮಸ್ಯೆಗಳನ್ನು ಕೇಳುವುದು ನನ್ನ ಕೆಲಸವಾಗಿದೆ. ಜನರ ಧ್ವನಿಯಾಗಿ ಮಾತನಾಡುತ್ತೇನೆ. ನಿಮ್ಮಗಳ ಪ್ರೀತಿಗೆ ಅಭಾರಿ ಎಂದು ಹರ್ಷವ್ಯಕ್ತಪಡಿಸಿದರು.