ಬೆಂಗಳೂರು, ಜೂ08(Daijiworld News/SS): ರಾಜ್ಯದಲ್ಲಿಯೂ ತಿರುಪತಿ ತಿಮ್ಮಪ್ಪನ ಮಾದರಿಯಲ್ಲಿಯೇ ಬೃಹತ್ ದೇವಸ್ಥಾನ ನಿರ್ಮಾಣವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ನಿರ್ಮಾಣವಾಗಲಿರುವ ಈ ದೇವಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ಸ್ವತಃ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಟ್ರಸ್ಟ್ ನಿಭಾಯಿಸಲಿದೆ. ಸುಮಾರು 15 ಎಕರೆ ಜಮೀನಿನಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ ಎನ್ನಲಾಗಿದೆ.
ಈಗಾಗಲೇ ರಾಮನಗರದಲ್ಲಿ ತಿಮ್ಮಪ್ಪನ ದೇವಾಲಯ ನಿರ್ಮಿಸಲು 15 ಎಕರೆ ಭೂಮಿ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮುಜರಾಯಿ ಇಲಾಖೆ ಸಚಿವ ಪಿಟಿ ಪರಿಮೇಶ್ವರ್ ಅವರು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಟಿಟಿಡಿ ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಜಾಮೀನು ಮಂಜೂರಾತಿಗೆ ಮನವಿ ಸಲ್ಲಿಸಿತ್ತು. ತಿಮ್ಮಪ್ಪನ ದೇಗುಲ ನಿರ್ಮಾಣದ ಜೊತೆಗೆ ರಾಜ್ಯದ ಆರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೂ ಸರ್ಕಾರ ಅಸ್ತು ಎಂದಿದೆ.