ಅನಂತ್'ನಾಗ್, ಜೂ08(Daijiworld News/SS): ಜಮ್ಮು ಮತ್ತು ಕಾಶ್ಮೀರದ ಕಣಿವೆನಾಡಿನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಈದ್ ಹಬ್ಬವನ್ನಾಚರಿಸಲು ರಜೆಯ ಮೇಲೆ ಮನೆಗೆ ತೆರಳಿದ್ದ ಸೈನಿಕನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
ಅನಂತ್ನಾಗ್ ಜಿಲ್ಲೆಯ ಸದೂರಾ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಮೃತ ಸೈನಿಕನನ್ನು ಮನ್ಜೂರ್ ಅಹಮದ್ ಬೇಗ್ ಎಂದು ಗುರುತಿಸಲಾಗಿದೆ.
ಈದ್ ಉಲ್ ಫಿತ್ರ ಹಬ್ಬವನ್ನಾಚರಿಸಲು ಸೈನಿಕ 12 ದಿನ ರಜೆ ಪಡೆದುಕೊಂಡು ಜೂನ್ 4 ರಂದು ಗ್ರಾಮಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಉಗ್ರರು ಹೇಡಿಗಳಂತೆ ಮನ್ಜೂರ್ ಅಹಮದ್ ಬೇಗ್ ಮೇಲೆ ದಾಳಿ ಮಾಡಿದ್ದಾರೆ.
2018ರಲ್ಲಿಯೂ ಈದ್ ಆಚರಿಸಲು ಮನೆಗೆ ಬರುತ್ತಿದ್ದ ಯೋಧನೊಬ್ಬನನ್ನು (ಔರಂಗಜೇಬ್) ಅಪಹರಿಸಿದ್ದ ಉಗ್ರರು ಅಮಾನುಷವಾಗಿ ಹತ್ಯೆಗೈದಿದ್ದರು.