ಜೈಪುರ,ಜೂ08(DaijiWorldNews/AZM):ಮೂರು ವರುಷದ ಹೆಣ್ಣು ಮಗುವಿನ ದೇಹದಾನ ಮಾಡುವುದರ ಮೂಲಕ ಪೋಷಕರು ಇತರರಿಗೆ ಮಾದರಿಯಾಗಿದ್ದಾರೆ.

ಹೃದಯ ರೋಗದಿಂದ ಮೂರು ವರುಷದ ಹೆಣ್ಣು ಮಗುವೊಂದು ಮೃತಪಟ್ಟಿದ್ದು, ಪೋಷಕರು ಮಗುವಿನ ದೇಹವನ್ನು ಜೋಧ್ ಪುರ ಏಮ್ಸ್ ಗೆ ದಾನ ಮಾಡಿದ್ದಾರೆ. ವಯಸ್ಸಿನ ದೇಹದಾನ ಮಾಡಿರುವುದು ಇದೇ ಮೊದಲ ಬಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಜೋಧ್ ಪುರ್ ರೋಡ್ ವೇಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಉಮೇದ್ ಸಿಂಗ್ ಮಗಳು ಜ್ಯೋತಿ ದೇಹವನ್ನು ದಾನ ಮಾಡಲಾಗಿದೆ, ಮೊದಲು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೆವು, ಆದರೆ ಅದು ಸಾಧ್ಯವಾಗದು ಎಂದು ತಿಳಿದಾಗ ದೇಹದಾನ ಮಾಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ನನ್ನ ಮಗಳ ದೇಹ ಇಡೀ ದೇಶಕ್ಕೆ ಉಪಯೋಗವಾಗುತ್ತದೆ ಎಂಬುದನ್ನು ತಿಳಿದಾಗ ನನ್ನ ಹೃದಯ ತುಂಬಿ ಬಂತು. ನಾವು ಯಾವಾಗಲು ಅವಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೆವು, ಹೀಗಾಗಿ ನನ್ನ ಹೆಂಡತಿ ಜೊತೆ ಮಾತನಾಡಿ ಆಕೆಯನ್ನು ಒಪ್ಪಿಸಿ ಅಂಗಾಂಗ ದಾನ ಮಾಡಲು ನಿರ್ಧರಿಸಿದೆವು.
ಅದಕ್ಕಾಗಿ ಆಕೆಯ ದೇಹವನ್ನು ಜೋಧ್ ಪುರ ಆಸ್ಪತ್ರೆಗೆ ತಂದೆವು, ಆದರೆ ಅಂಗಾಂಗ ದಾನ ಮಾಡುವ ಸೌಲಭ್ಯ ಇಲ್ಲ ಎಂದು ವೈದ್ಯರು ಹೇಳಿದರು, ಹೀಗಾಗಿ ದೇಹದಾನ ಮಾಡಿದೆವು ಎಂದು ಹೇಳಿದ್ದಾರೆ.
ಜ್ಯೋತಿಯನ್ನು ಉಳಿಸಿಕೊಳ್ಳಲು ನಾವು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿದೆವು,ಹಲವು ನಗರದಿಂದ ತಜ್ಞ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದೆವು, ಆದರೆ .ಯಾವುದೇ ಪ್ರಯೋಜನವಾಗಲಿಲ್ಲ.
ಜೂನ್ 3 ರಂದು ಆಕೆಯ ಆರೋಗ್ಯ ಹದಗೆಟ್ಟಿತ್ತು, ಆಗಾ ಜೋಧ್ ಪುರದ ಏಮ್ಸ್ ಆಸ್ಪತ್ರೆಗೆ ಕರೆತಂದೆವು, ಆಕೆಗೆ ಹೃದಯಾಘಾತವಾಗಿರುವುದಾಗಿ ವೈದ್ಯರು ಹೇಳಿದರು,.ಆಕೆಯನ್ನು ಐಸಿಯು ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಬೆಳಗ್ಗೆ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ತಂದೆ ಕಣ್ಣೀರು ಸುರಿಸಿದ್ದಾರೆ.