ಬೆಂಗಳೂರು,ಜೂ08(DaijiWorldNews/AZM): ಮುಂದಿನ 8,10 ಗಂಟೆಗಳಲ್ಲಿ ಕರ್ನಾಟಕ ಸೇರಿದಂತೆ ಛತ್ತೀಗಢ,ಒಡಿಶಾ,ಮಹಾರಾಷ್ಟ್ರಗಳಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್ ಮಾಹಿತಿ ನೀಡಿದೆ.
ಕರ್ನಾಟಕ ವಿಜಯಪುರ, ಕಲಬುರಗಿ, ಸಾವಣಗೆರೆ, ಬಳ್ಳಾರಿ, ಉತ್ತರ ಕನ್ನಡ, ಕೊಪ್ಪಳ ಭಾಗದಲ್ಲಿ ಮಳೆಯಾಗಲಿದೆ. ಒಡಿಶಾದಲ್ಲಿ ಬಾಲೇಶ್ವರ, ಗಜಪತಿ, ಗಂಜಮ್, ಜಾಜಪುರ, ಮಯ್ಯೂರ್ ಭಂಜ್, ನಾಯಾಗರ್, ಪುರಿ, ರಾಯಗಡ, ಸಂಬಲ್ಪುರ, ಸುಂದರಗಢದಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ದೊರೆತಿದೆ.
ಛತ್ತೀಸ್ಗಢದಲ್ಲಿ ಗಾಳಿಯು ಗಂಟೆಗೆ 40-50 ವೇಗದಲ್ಲಿ ಬೀಸುತ್ತಿದ್ದು, ಬಲೋಡಾ ಬಜಾರ್, ಚಂಪ, ಕಬೀರ್ಧಾಮ, ನಾರಾಯಣಪುರ, ರಾಯ್ಗಢ, ರಾಯ್ಪುರ, ಸುಕ್ಮಾದಲ್ಲಿ ಮುಂದಿನ 6-8 ತಾಸುಗಳಲ್ಲಿ ಮಳೆಯಾಗಲಿದೆ.
ಮಹಾರಾಷ್ಟ್ರದಲ್ಲಿ ಅಂಕೋಲಾ, ಅಮರಾವತಿ, ಕೊಲ್ಹಾಪುರ, ಲಾತೂರ್, ನಾಗ್ಪುರ, ಪುಣೆ, ಸಿಂಧುದುರ್ಗ, ವರ್ದಾದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.