ವಿಜಯಪುರ,ಜೂ08(DaijiWorldNews/AZM): ಜಿಂದಾಲ್ ಜಾಮೀನು ಮಾರಾಟ ಪ್ರಕರಣದಲ್ಲಿ ಮೈತ್ರಿ ಸರಕಾರವನ್ನು ಡೀಲ್ ಸರಕಾರವೆಂದು ಕರೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಗೃಹ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಾಟಕವಾಡುತ್ತಿದ್ದು, ಅವರು ತಮ್ಮ ನಾಟಕವನ್ನು ಬಿಡಬೇಕು ಎಂದು ಗೃಹ ಸಚಿವರು ಹೇಳಿದ್ದಾರೆ. ಮೈತ್ರಿ ಸರ್ಕಾರವನ್ನು ಜಗದೀಶ್ ಶೆಟ್ಟರ್ ಜಿಂದಾಲ್ ಜಾಮೀನು ಮಾರಾಟ ಪ್ರಕರಣದಲ್ಲಿ ಡೀಲ್ ಸರ್ಕಾರ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಂಬಿ ಪಾಟೀಲ್ ' ಅವರು ತಿಳಿದು ತಿಳಿದು ನಾಟಕ ಮಾಡುವುದನ್ನು ಶೆಟ್ಟರ್ ಬಿಡಬೇಕು ಎಂದು ಹೇಳಿದ್ದಾರೆ.
ಇನ್ನು ಪೊಲೀಸ್ ಇಲಾಖೆಯ ರಜೆ ಕಡಿತ ಆಗಿರುವ ಬಗ್ಗೆ ಚರ್ಚೆ ಮಾಡಲಾಗುವುದು ಯಾವ ಪೊಲೀಸರು ಆತಂಕ ಪಡಬಾರದು. ಪೊಲೀಸ್ ಇಲಾಖೆಯ ಬಗ್ಗೆ ಹೆಮ್ಮೆ ಪಡುವ ಗೃಹ ಸಚಿವ ನಾನು. ಪೊಲೀಸರು ಬಹಳ ಕಷ್ಟದಿಂದ ದುಡಿಯುತ್ತಾರೆ, ನನಗೆ ಪೊಲೀಸರ ಬಗ್ಗೆ ಹೆಮ್ಮೆ ಇದೆ.ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದರು.