ತಿರುಚಿ, ಜೂ 10(Daijiworld News/MSP): ಸಾವಿರಾರು ವರ್ಷಗಳ ಇತಿಹಾಸವುಳ್ಳ ತಂಜಾವೂರು ಬೃಹದೀಶ್ವರ ದೇವಸ್ಥಾನ (ದೊಡ್ಡ ದೇವಸ್ಥಾನ) ಸಂಕೀರ್ಣದಲ್ಲಿದ್ದ ಶಿಲಾ ಬಾಲಿಕೆಯ ಮುಂದೆ ಅಶ್ಲೀಲ ಭಂಗಿಯಲ್ಲಿ ನಿಂತ ಫೋಟೋ ತೆಗೆದು ಬಳಿಕ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಯುವಕನನ್ನು ತಮಿಳುನಾಡಿನ ತಿರುಚಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಯನ್ನು ಮುಜಿಬುರ್ ರಹಮಾನ್ (28) ಎಂದು ಗುರುತಿಸಲಾಗಿದೆ. ಈತ ತಂಜಾವೂರು ದೇವಸ್ಥಾನದಲ್ಲಿದ್ದ ಶಿಲಾ ಬಾಲಿಕೆಯನ್ನು ತಬ್ಬಿಕೊಂಡು, ಮುತ್ತಿಕ್ಕಿದಂತೆ ಹಾಗೂ ಇನ್ನಿತರ ಆಕ್ಷೇಪಾರ್ಹ ಭಂಗಿಯ ಪೋಟೋಗಳನ್ನು ಹಾಗು ಸೆಲ್ಫಿಗಳನ್ನು ತನ್ನ ಫೇಸ್ ಬುಕ್ ಖಾತೆಗೆ ಪೋಸ್ಟ್ ಮಾಡಿದ್ದ. ಇತನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ರೆಹಮಾನ್ ನ ನಡವಳಿಕೆ ಮತ್ತು ಫೇಸ್ಬುಕ್ ಪೋಸ್ಟ್ ಬಗ್ಗೆ ಧಾರ್ಮಿಕ ಮುಖಂಡರ, ಭಕ್ತರು ಮತ್ತು ಇತಿಹಾಸಕಾರು ವ್ಯಾಪಕ ಆಕ್ರೋಶ ವ್ಯಕ್ರಪಡಿಸಿದ್ದರು. ಈ ಹಿನ್ನಲೆಯಲ್ಲಿ ತಿರುಚಿ ಪೊಲೀಸ್ ಇಲಾಖೆ ಆತನ ವಿರುದ್ದ ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಿತ್ತು.
"ಮಧುರೈನ ಓತಕ್ಕಡೈ ಪ್ರದೇಶದ ನಿವಾಸಿಯಾಗಿರುವ ರೆಹಮಾನ್. ಪ್ರಸ್ತುತ ತಿರುಚಿಯಲ್ಲಿ ಫುಡ್ ಡೆಲಿವರಿ ಮಾಡುವ ಕಾರ್ಯನಿರ್ವಹಿಸುತ್ತಿದ್ದಾನೆ. ಬುಧವಾರದಂದು ಸುತ್ತಾಡೆಂದು ಹೋಗಿದ್ದ ಈತ ದೇವಸ್ಥಾನಕ್ಕೂ ಭೇಟಿ ನೀಡಿ ಮಹಿಳಾ ಶಿಲ್ಪಗಳೊಂದಿಗೆ ವಿವಾದಾತ್ಮಕ ಚಿತ್ರಗಳನ್ನು ತೆಗೆದುಕೊಂಡಿದ್ದ. ಮಾತ್ರವಲ್ಲದೆ ಶಿಲ್ಪಗಳು "ಶಾಲು" ಧರಿಸಿರಬೇಕಿತ್ತು ಎಂದು ಕಮೆಂಟ್ ಹಾಕಿ ಫೇಸ್ ಬುಕ್ ಗೆ ಪೋಸ್ಟ್ ಮಾಡಿದ್ದ. ಶನಿವಾರ ಮಧ್ಯಾಹ್ನ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ವಿಧಿಸಿದ್ದು ತಿರುಚಿಯ ಕೇಂದ್ರೀಯ ಸೆರೆಮನೆಗೆ ಕಳುಹಿಸಲಾಗಿದೆ" ಎಂದು ಕಂಟೋನ್ಮೆಂಟ್ ಪೋಲಿಸ್ ಸ್ಟೇಷನ್ ತಿರುಚಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.