ಬೆಂಗಳೂರು, ಜೂ11(Daijiworld News/SS): ರಾಜ್ಯ ಸರ್ಕಾರವು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಜನಪರವಾದ ಕೆಲಸಗಳು ರಾಜ್ಯ ಸರ್ಕಾರದಿಂದ ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವೂ ಕೇಂದ್ರದ ಅನುದಾನ ಬಳಸಿಕೊಳ್ಳುತ್ತಿಲ್ಲ, ನಿಧಾನ ಧೋರಣೆ ಅನುಸರಿಸುತ್ತಿದೆ. ಮಾತ್ರವಲ್ಲ, ರಾಜ್ಯ ಸರ್ಕಾರವು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಜನಪರವಾದ ಕೆಲಸವನ್ನು ಮಾಡುತ್ತಿಲ್ಲ. ಮಿತ್ರಪಕ್ಷಗಳ ಒಳಜಗಳದಿಂದಲೇ ಸರಕಾರ ಬೀಳಲಿದೆ. ಸಂಪುಟ ವಿಸ್ತರಣೆ ಸಾಹಸವೇ ಸರಕಾರವನ್ನು ಮುಳುಗಿಸಲಿದೆ ಎಂದು ದೂರಿದರು.
ಸರ್ಕಾರದ ಪತನಕ್ಕೆ ಸಂಪುಟ ವಿಸ್ತರಣೆಯೇ ಅಡಿಗಲ್ಲಾಗಲಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳು ಶಕ್ತಿಮೀರಿ ಶ್ರಮಿಸುತ್ತಿರುವುದು ಸುಳ್ಳಲ್ಲ, ಜೂನ್ 12ರಂದು ರಾಜ್ಯಪಾಲ ವಜುಭಾಯಿವಾಲ ಅವರ ಭೇಟಿಗೆ ಸಮಯ ನಿಗದಿಪಡಿಸಿಕೊಂಡಿರುವ ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡಿದ್ದಂತಾಗಿದೆ ಎಂದು ವ್ಯಂಗ್ಯವಾಗಿ ನುಡಿದರು.