ನವದೆಹಲಿ, ಜೂ 11 (Daijiworld News/SM): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 2004ರಿಂದ ದೆಹಲಿಯಲ್ಲಿ ನೆಲೆಸಿದ್ದ ಬಂಗಲೆ ಇನ್ನು ಮುಂದೆ ಕೈ ತಪ್ಪಲಿದೆ. ಈಗಾಗಲೇ ಕೇಂದ್ರ ಸ್ರಕಾರ ಪಟ್ಟಿಯೊಂದನ್ನು ಪ್ರಕಟಿಸಿದ್ದು ಅದರಲ್ಲಿ ಹಲವು ಮಂದಿ ಬಂಗಲೆ ಕಳೆದುಕೊಳ್ಳಲಿದ್ದಾರೆ.
ಯಾರು ಯಾರು ಬಂಗಲೆಯನ್ನು ಖಾಲಿ ಮಾಡಬೇಕು ಎಂಬುದರ ಬಗ್ಗೆ ಪಟ್ಟಿ ತಯಾರಿಸಿ ಲೋಕಸಭೆ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಬಂಗಲೆಯೂ ಸೇರಿದೆ.
ಇವರ ಬಂಗಲೆ ಮಾತ್ರವಲ್ಲದೆ 12 ಮಂದಿ ಸಂಸದರ ಬಂಗಲೆ ಕೂಡ ಖಾಲಿ ಮಾಡಲು ಸೂಚನೆ ನೀಡಲಾಗಿದೆ. 2004ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಬಳಿಕ ಈ ಬಂಗಲೆಯನ್ನು ಅಧಿಕೃತ ನಿವಾಸ ಮಾಡಿಕೊಂಡಿದ್ದರು. Type 8 ಕೆಟಗೆರಿಗೆ ಸೇರಿರುವ ಈ ಬಂಗಲೆ ಉನ್ನತ ಮಟ್ಟದ ಸೌಲಭ್ಯಗಳನ್ನು ಹೊಂದಿರುತ್ತದೆ.
517 ಬಂಗಲೆಗಳನ್ನು ಹೊಸ ಸಂಸದರಿಗೆ ಹಂಚಿಕೆ ಮಾಡಲು ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಬಂಗಲೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಹುಲ್ ಗಾಂಧಿ ಅವರ ಬಂಗಲೆ ಹೊಸಬರಿಗೆ ಹಂಚಿಕೆಯಾಗಲು ಲಭ್ಯವಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.