ಹೊಸದಿಲ್ಲಿ, ಜೂ12(Daijiworld News/SS): ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಅವರನ್ನು ಮರು ನೇಮಿಸಿ ಕ್ಯಾಬಿನೆಟ್ ನೇಮಕ ಸಮಿತಿಯು ಅನುಮೋದಿಸಿದೆ.

ಮೇ 31ರಿಂದಲೇ ಈ ನೇಮಕಾತಿ ಅನ್ವಯಗೊಂಡಿದೆ. ಉಳಿದಂತೆ ಪಿಕೆ ಮಿಶ್ರಾ ಅವರು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕವಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿಯಾಗಿ ಈ ಮೊದಲು ಅಜಿತ್ ದೋವಲ್ ಅವರನ್ನು ಪ್ರಧಾನಿ ಕಾರ್ಯಾಲಯ ಮತ್ತೆ ನೇಮಿಸಿಕೊಂಡಿತ್ತು.
ಪ್ರಧಾನ ಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಪಿ.ಕೆ.ಮಿಶ್ರಾ ನೇಮಕವಾಗಿದ್ದು, ಇಬ್ಬರೂ ಅಧಿಕಾರಿಗಳಿಗೂ ಈ ಬಾರಿ ಕ್ಯಾಬಿನೆಟ್ ಸ್ಥಾನ-ಮಾನ ನೀಡಲಾಗಿದೆ. ಐದು ವರ್ಷಗಳ ಅವಧಿಗೆ ಅವರು ಮರುನೇಮಕಗೊಂಡಿದ್ದಾರೆ. ನೇಮಕಾತಿಗಳ ಸಂಪುಟ ಸಮಿತಿ ಈ ಕ್ರಮ ಕೈಗೊಂಡಿದ್ದು, ಮೇ 31ರಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ.
ನೃಪೇಂದ್ರ ಮಿಶ್ರಾ 1967ನೇ ಬ್ಯಾಚ್ನ ಐಎಎಸ್ ಅಧಿಕಾರಿ. ಈಗ ಅವರು ನಿವೃತ್ತಿ ಹೊಂದಿದ್ದಾರೆ. ಕಳೆದ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಕಾರ್ಯವನ್ನು ಮೆಚ್ಚಿ ಮತ್ತೆ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.
ಈ ಹಿಂದಿನ ಎನ್ ಡಿಎ ಸರ್ಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಅಜಿತ್ ಧೋವಲ್'ರನ್ನೂ ಕೂಡ ಮುಂದಿನ ಐದು ವರ್ಷಗಳಿಗೆ ಮರು ನೇಮಕ ಮಾಡಿಕೊಂಡಿದ್ದಲ್ಲದೇ ಅವರಿಗೂ ಕ್ಯಾಬಿನೆಟ್ ಸ್ಥಾನಮಾನ ನೀಡಿತ್ತು. ಆ ಮೂಲಕ ಧೋವಲ್ ಸತತ ಎರಡನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆಯಾದ ಮೊದಲ ಅಧಿಕಾರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕಳೆದ ಸರ್ಕಾರದಲ್ಲಿ ಧೋವಲ್ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿತ್ತು.