ಉತ್ತರ ಪ್ರದೇಶ, ಜೂನ್ 12 (Daijiworld News/MSP): ಸುದ್ದಿಯೊಂದಕ್ಕೆ ಸಂಬಂಧಿಸಿ ವರದಿಗಾಗಿ ತೆರಳಿದ್ದ ಪತ್ರಕರ್ತನೊಬ್ಬನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಮಾತ್ರವಲ್ಲದೆ, ರೈಲ್ವೇ ಪೊಲೀಸರು ಅಮಾನುಷವಾಗಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಶಮ್ಲಿಯಲ್ಲಿ ನಡೆದಿದೆ.
ಉತ್ತರಪ್ರದೇಶದ ಶಮ್ಲಿ ಸಮೀಪದ ಧಿಮಾನ್ಪುರದಲ್ಲಿ ರೈಲೊಂದು ಹಳಿತಪ್ಪಿತ್ತು. ಈ ಹಿನ್ನಲೆಯಲ್ಲಿ ಇದರ ಸುದ್ದಿ ಸಂಗ್ರಹಕ್ಕಾಗಿ ಅಲ್ಲಿಗೆ ಪತ್ರಕರ್ತ ತೆರಳಿದ್ದ. ಆದರೆ ಅಲ್ಲಿ ಮಫ್ತಿಯಲ್ಲಿ ರೈಲ್ವೇ ಪೊಲೀಸರು ಪತ್ರಕರ್ತನ ಕೈಯಿಂದ ಕ್ಯಾಮರಾ ಕಿತ್ತುಕೊಂಡು ಮನಬಂದಂತೆ ಥಳಿಸಿದ್ದಾರೆ ಎಂದು ಪತ್ರಕರ್ತ ಅಳಲು ತೋಡಿಕೊಂಡಿದ್ದಾನೆ.
ಈ ಬಗ್ಗೆ ಪತ್ರಕರ್ತ ವಿವರಿಸಿದ್ದು, ಘಟನಾ ಸ್ಥಳದಲ್ಲಿ ಮೊದಲಿಗೆ ಓರ್ವ ಪೊಲೀಸ್ ಪತ್ರಕರ್ತನ ಮೇಲೆ ಕೈ ಮಾಡಿದ್ದಾರೆ. ಈ ವೇಳೆ ನನ್ನ ಬಳಿಯಿದ್ದ ಕ್ಯಾಮರಾ ನೆಲಕ್ಕೆ ಬಿತ್ತು. ಇದನ್ನು ಹೆಕ್ಕಲೆಯ್ನಿಸಿದ ಸಂದರ್ಭದಲ್ಲಿ ಎಲ್ಲರೂ ಹೊಡೆಯಲು ಪ್ರಾರಂಭಿಸಿದರು. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಎಲ್ಲರೂ ಸೇರಿ ನನ್ನನ್ನು ಸುತ್ತುವರಿದರು. ನನ್ನ ಬಟ್ಟೆಯನ್ನು ಹರಿದು, ಬಾಯಿಯನ್ನು ಬಲವಂತವಾಗಿ ತೆರೆದು ಮೂತ್ರ ಮಾಡಿದರು" ಎಂದು ಪತ್ರಕರ್ತ ಘಟನೆಯನ್ನು ವಿವರಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೇ ಪೊಲೀಸರನ್ನು ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಕುಮಾರ್, ಕಾನ್ಸ್ಟೇಬಲ್ ಸುನಿಲ್ ಕುಮಾರ್ ಹಾಗೂ ರೈಲ್ವೇ ಪೊಲೀಸ್ ಓರ್ವನನ್ನು ಸದ್ಯ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.